ನವದೆಹಲಿ[ಮಾ.15]: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಪಾಲ ಆಯ್ಕೆ ಸಮಿತಿಗೆ 'ವಿಶೇಷ ಆಮಂತ್ರಿತ ವ್ಯಕ್ತಿ'ಯಾಗಿ ಬರಲು ಮೋದಿ ಸರ್ಕಾರ ನೀಡಿರುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಖರ್ಗೆ ತಿರಸ್ಕರಿಸಿರುವುದರ ಹಿಂದಿನ ಕಾರಣವೇನು ಅಂತೀರಾ? ಇಲ್ಲಿದೆ ವಿವರ

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಲೋಕಪಾಲರ ನೇಮಕಕ್ಕಾಗಿ  ಆಯ್ಕೆ ಸಮಿತಿ ಸಭೆ ನಡೆಸಲು 10 ದಿನಗಳ ಕಾಲಾವಕಾಶ ನೀಡಿತ್ತು. ಆದರೀಗ ಸುಪ್ರೀಂ ನೀಡಿರುವ ಗಡುವು ಕೂಡಾ ಮುಗಿದಿದೆ. ಲಭ್ಯವಾದ ಮಾಹಿತಿ ಅನ್ವಯ ಲೋಕಪಾಲರ ನೇಮಕಕ್ಕೆ ಸಂಬಂಧಿಸಿದಂತೆ ಇಂದು ಮಾರ್ಚ್ 15ರಂದು ಆಯ್ಕೆ ಸಮಿತಿ ಸಭೆ ನಡೆಯಲಿದೆ ಎನ್ನಲಾಗಿದೆ. ಈ ಸಭೆಗೆ 'ವಿಶೇಷ ವ್ಯಕ್ತಿ'ಯಾಗಿ ಖರ್ಗೆಯವರನ್ನು ಆಹ್ವಾನಿಸಲಾಗಿದ್ದು, ಇದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಖರ್ಗೆ 'ವಿಶೇಷ ವ್ಯಕ್ತಿಯಾಗಿ ಸಭೆಯಲ್ಲಿ ಪಾಲ್ಗೊಂಡರೆ ಲೋಕಪಾಲರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಅಧಿಕಾರವಿರುವುದಿಲ್ಲ. ಇಂತಹ ಗಂಭೀರ ವಿಚಾರದಲ್ಲಿ ವಿಪಕ್ಷ 'ಮೌನ' ವಹಿಸಬೇಕಾಗುತ್ತದೆ. ಹೀಗಾಗಿ ಈ ಆಮಂತ್ರಣ ಸ್ವೀಕರಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

ಕೈಪಡೆಯಲ್ಲಿ ಅಲ್ಲೋಲ ಕಲ್ಲೋಲ; ಸೋಲಿಲ್ಲದ ಸರದಾರನ ಕ್ಷೇತ್ರ ಚೇಂಜ್?

ಲೋಕಪಾಲರ ಆಯ್ಕೆ ಸಮಿತಿಯಲ್ಲಿ ಪ್ರತಿಪಕ್ಷ ಅಥವಾ ವಿರೋಧ ಪಕ್ಷದಲ್ಲಿರುವ ಅತಿದೊಡ್ಡ ಪಕ್ಷದ ಪ್ರತಿನಿಧಿಯಾಗಿ ತಮಗೆ ಸ್ಥಾನ ನೀಡಿಲ್ಲ ಎಂಬುವುದು ಈ ಹಿಂದಿನಿಂದಲೂ ಕೇಳಿ ಬಂದಿರುವ ವಿವಾದ. ಸದ್ಯ ಕೆಂದ್ರ ಸರ್ಕಾರವನ್ನು ಆರೋಪಿಸಿರುವ ಖರ್ಗೆ 'ಕಳೆದ 5 ವರ್ಷಗಳಿಂದ ಲೋಕಪಾಲರನ್ನು ನೇಮಕ ಮಾಡುವುದಿಲ್ಲ ಎಂಬ ನೆಪ ನೀಡಿ ಆಯ್ಕೆ ಸಮಿತಿ ಸಭೆಯನ್ನು ಕರೆದಿರಲಿಲ್ಲ' ಎಂದಿದ್ದಾರೆ. 

ಮಲ್ಲಿಕಾರ್ಜುನ ಖರ್ಗೆಯಿಂದ ಹೊಟ್ಟೆ ಕಿಚ್ಚು ಪಾಲಿಟಿಕ್ಸ್

2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ 44ಕ್ಷೇತ್ರಗಳಲ್ಲಿ ಗೆಲುವು ಪಡೆದ ಕಾರಣ ಕಾಂಗ್ರೆಸ್ ಗೆ ಸದನದಲ್ಲಿ ಅಧಿಕೃತವಾಗಿ ಪ್ರತಿಪಕ್ಷದ ನಾಯಕ ಸ್ಥಾನ ಸಿಕ್ಕಿರಲಿಲ್ಲ. ಇದಕ್ಕಾಗಿ ಒಟ್ಟು 543 ಕ್ಷೇತ್ರಗಳಲ್ಲಿ ಶೇ. 10ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ.