ಜಾರಕಿಹೊಳಿ ಬ್ರದರ್ಸ್ ನಿಂದಾಗಿ ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನಗೊಂಡಿದೆ ಎನ್ನುವಷ್ಟರಲ್ಲಿಯೇ ಮತ್ತೊಬ್ಬ ನಾಯಕ ಅಸಮಾಧಾನ ಹೊರ ಹಾಕಿದ್ದಾರೆ. 

ಬೆಂಗಳೂರು, [ಸೆ.25]: ಜಾರಕಿಹೊಳಿ ಬ್ರದರ್ಸ್ ನಿಂದಾಗಿ ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನಗೊಂಡಿದೆ ಎನ್ನುವಷ್ಟರಲ್ಲಿಯೇ ಮತ್ತೊಬ್ಬ ನಾಯಕ ಅಸಮಾಧಾನ ಹೊರ ಹಾಕಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 15ದಿನಗಳಿಂದ ಕಾಂಗ್ರೆಸ್ ನಾಯಕರ ಕೈಗೆ ಸಿಗದೇ ಬಂಡಾಯ ಎದ್ದಿದ್ದ ಹೊಸಕೋಟೆ ಕ್ಷೇತ್ರದ ಶಾಸಕ ಎಂ. ಟಿ.ಬಿ. ನಾಗರಾಜ್ ಅವರನ್ನು ನಿನ್ನೆ[ಸೋಮವಾರ] ಡಿ.ಕೆ.ಶಿವಕುಮಾರ್ ಹಾಗೂ ಜಮಿರ್ ಅಹಮ್ಮದ್ ಖಾನ್ ಭೇಟಿ ಮಾಡಿ ಸಮಧಾನಪಡಿಸಿದ್ದರು. 

ಅದರಂತೆ ಇಂದು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಸಮಧಾನವನ್ನು ಹೊರ ಹಾಕಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಾಗರಾಜ್, ನನಗೆ ಅಸಮಾಧಾನ ಇರೋದು ನಿಜ. ಸರ್ಕಾರದಲ್ಲಿ ಪಾರದರ್ಶಕತೆ ಇಲ್ಲ. ಸರ್ಕಾರದಲ್ಲಿ ತಾರತಮ್ಯ ಮಾಡಲಾಗ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಯಾವ ಭರವಸೆಯನ್ನು ನನಗೆ ನೀಡಿಲ್ಲ. ಮುಂದೆ ನೋಡೋಣ ಎಂದು ಹೇಳಿದ್ದಾರೆ. ಎಲ್ಲಿಯೂ ಹೋಗಲ್ಲ. ಕಾದು ನೋಡೋಣ ಎಂದು ಬೇಸರದಿಂದಲೇ ಎಂ. ಟಿ.ಬಿ. ನಾಗರಾಜ್ ಅವರು ಸಿದ್ದರಾಮಯ್ಯ ನಿವಾಸದಿಂದ ಕಾಲ್ಕಿತ್ತರು.