ಕಾಂಗ್ರೆಸ್ ಶಾಸಕಿ ಜೊತೆ ರಾಹುಲ್ ಗಾಂಧಿ ವಿವಾಹ

First Published 6, May 2018, 3:37 PM IST
Congress Raebareli MLA Upset Over Rumours of Marriage with Rahul Gandhi
Highlights

ಸದ್ಯ ಕರ್ನಾಟಕ ಚುನಾವಣೆ ಕಾವು ಹೆಚ್ಚಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರಿಗೆ ಮದುವೆ ಎನ್ನುವ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ನವದೆಹಲಿ :  ಸದ್ಯ ಕರ್ನಾಟಕ ಚುನಾವಣೆ ಕಾವು ಹೆಚ್ಚಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರಿಗೆ ಮದುವೆ ಎನ್ನುವ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಜೊತೆ ರಾಹುಲ್ ವಿವಾಹ ನಡೆಯುತ್ತಿದೆ. ಈ ಬಗ್ಗೆ ದಿನಾಂಕವನ್ನು ಘೋಷಿಸಲಾಗಿದೆ ಎಂದು ಎಲ್ಲೆಡೆ ವಾಟ್ಸಾಪ್ ಗ್ರೂಪ್ ಗಳಲ್ಲಿಯೂ ಕೂಡ ಇಂತಹ ಸುದ್ದಿಯೊಂದು ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ.

ಅದಿತಿ ಅವರು ರಾಹುಲ್ ಕುಟುಂಬದೊಂದಿಗೆ ಇರುವಂತಹ ಫೊಟೊಗಳನ್ನು ಹಾಕುವ ಮೂಲಕ ಈ ರೀತಿಯಾಗಿ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಲಾಗಿದೆ. 

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದಿತಿ ಸಿಂಗ್ ಇದೊಂದು ಸುಳ್ಳು ಸುದ್ದಿ. ಇಂತಹ ಅಪಪ್ರಚಾರದಿಂದ ತಮಗೆ ಬೇಸರವಾಗಿದೆ. ರಾಹುಲ್ ನನಗೆ ರಾಖಿ ಸಹೋದರ. ನಾನು ಅವರಿಗೆ ರಾಖಿ ಕಟ್ಟಿದ್ದೇನೆ ಎಂದು ಹೇಳಿದ್ದಾರೆ.  ಈ ಮೂಲಕ ಈ ಸುಳ್ಳು ಸುದ್ದಿಗೆ ಫುಲ್ ಸ್ಟಾಪ್ ಬಿದ್ದಂತಾಗಿದೆ. 
 

loader