ಚೆನ್ನೈ(ಆ.8): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ನಿಧನರಾಧ ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಪ್ರಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಕರುಣಾನಿಧಿ ಪ್ರಾರ್ಥೀವ ಶರೀರವನ್ನು ಚೆನ್ನೈನ ರಾಜಾಜಿ ಹಾಲ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ವಿಮಾನ ನಿಲ್ದಾಣದಿಂದ ನೇರವಾಗಿ ರಾಜಾಜಿ ಹಾಲ್ ಗೆ ಬಂದ ರಾಹುಲ್, ಕರುಣಾನಿಧಿ ಅಂತಿಮ ದರ್ಶನ ಪಡೆದರು.

ಈ ವೇಳೆ ಕರುಣಾನಿಧಿ ಪುತ್ರ ಎಂ.ಕೆ. ಸ್ಟಾಲಿನ್, ಪುತ್ರಿ ಕನಿಮೋಳಿ ಅವರನ್ನು ಸಂತೈಸಿದ ರಾಹುಲ್, ಕುಟುಂಬದ ದು:ಖದಲ್ಲಿ ತಾವೂ ಭಾಗಿಯಾಗಿರುವುದಾಗಿ ತಿಳಿಸಿದರು. ಇನ್ನು ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ ಇತರ ನಾಯಕರು ಜೊತೆಗಿದ್ದರು.