ಚೆನ್ನೈ[ಮಾ.13] ದೇಶಕ್ಕೆ ಕೋಟ್ಯಂತರ ರೂ. ವಂಚನೆ ಮಾಡಿ ವಿದೇಶಕ್ಕೆ ಹಾರಿರುವ ವಂಚಕ ನೀರವ್ ಮೋದಿ ಮೇಲೆ ವಾಗ್ದಾಳಿ ಮಾಡಲು ಮುಂದಾಗಿದ್ದ ವೇಳೆ ರಾಹುಲ್ ಗಾಂಧಿ ಎಡವಟ್ಟು ಮಾಡಿಕೊಂಡಿದ್ದಾರೆ.

ನಾವು ಅಂದರೆ ನಾಗರಿಕರು ದೇಶಕ್ಕಾಗಿ ತೆರಿಗೆ ಕಟ್ಟುತ್ತೇವೆ. ಆದರೆ ನರೇಂದ್ರ ಮೋದಿ ಅಂತಹ ಕೆಲ ವಂಚಕ ಉದ್ಯಮಿಗಳು ಅದನ್ನು ಲಪಟಾಯಿಸುತ್ತಾರೆ ಎಂದು ಬಾಯಿ ತಪ್ಪಿ ಹೇಳಿದ್ದಾರೆ. ತಕ್ಷಣಕ್ಕೆ ಸಾರಿ ಕೇಳಿ ತಮ್ಮ ಭಾಷಣ ಮುಂದುವರಿಸಿದ್ದಾರೆ.

#GoBackRahul: ರಾಹುಲ್ ವಿರುದ್ಧ ತಮಿಳರ ಆಕ್ರೋಶ

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ವೇಳೆ ನರೇಂದ್ರ ಮೋದಿ ಎನ್ನುವ ಬದಲು ನೀರವ್ ಮೋದಿ ಎಂದು ಬಾಯಿ ತಪ್ಪಿ ಹೇಳಿದ್ದಾರೆ.  ಮಾತನಾಡುವ ಬರದಲ್ಲಿ, ನೀರವ್ ಮೋದಿ ಭಾರತದಲ್ಲಿ ಎಷ್ಟು ಉದ್ಯೋಗವಕಾಶ ಸೃಷ್ಟಿ ಮಾಡಿದ್ದಾರೆ?  ಎಂದು ಹೇಳಿದ್ದು ಟ್ರೋಲ್ ಆಗುತ್ತಿದೆ.