ಪಣಜಿ[ಜು.09]: ರಾಜ್ಯದ ಕನಿಷ್ಠ 10 ಕಾಂಗ್ರೆಸ್‌ ಶಾಸಕರು, ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ವರದಿಗಳ ಬಗ್ಗೆ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಗೋವಾಫಾರ್ವಡ್‌ ಪಕ್ಷದ ವಿಜಯ್‌ ಸರ್‌ದೇಸಾಯಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಹಲವಾರು ಮಂಗಗಳಿವೆ. ಅವೆಲ್ಲಾ ಅಲ್ಲಿಂದಿಲ್ಲಿಗೆ ಹಾರಲು ಸಿದ್ಧವಾಗಿವೆ. ಆದರೆ ನಾವು ಅವರಿಗೆ ನಮ್ಮ ಮೈತ್ರಿಯಲ್ಲಿ ಜಾಗ ಕಲ್ಪಿಸುವುದಿಲ್ಲ. ಅವರಿಗೆ ಇನ್ನೆಲ್ಲಿ ಬೇಕೋ ಅಲ್ಲಿಗೆ ಹೋಗಲಿ ಎಂದಿದ್ದಾರೆ.

ಇತ್ತೀಚೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿನಯ್‌ ತೆಂಡುಲ್ಕರ್‌ ಕೂಡಾ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ. ಆದರೆ ನಾವೇ ಅವರಿಗೆ ಅವಕಾಶ ಕೊಟ್ಟಿಲ್ಲ ಎಂದಿದ್ದರು.