ಕೆ.ಆರ್.ಪೇಟೆ ತಾಲೂಕಿನ ಹೊನ್ನೇನಹಳ್ಳಿಯ ಸರ್ವೇ ನಂ.೫೧ ಜಮೀನು ಮಾಲೀಕರಾದ ರಾಜಣ್ಣ ಎಂಬುವರು ತಮ್ಮ ಜಮೀನನ ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್ನಿಂದ ಜಮೀನು ಹದಗೊಳಿಸಲು ಮುಂದಾದಾಗ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಚಂದ್ರಶೇಖರ್ ಏಕಾಏಕಿ ರೈತನ ಬಳಿ ತೆರಳಿ ಈ ಜಮೀನು ತನಗೆ ಸೇರಿದ್ದಾಗಿ ತಗಾದೆ ತೆಗೆದು ಉಳುಮೆಗೆ ತಡೆಯೊಡ್ಡಿದ್ದಾರೆ.
ಬೆಂಗಳೂರು(ನ.18): ಜಮೀನು ವಿಚಾರವಾಗಿ ಕೆ.ಆರ್.ಪೇಟೆಯ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಮಾಯಕ ರೈತ ಕುಟುಂಬದ ಇಬ್ಬರ ಮೇಲೆ ಹಲ್ಲೆ ಮಾಡಿ, ಪೆಟ್ರೋಲ್ ಹಾಕಿ ಸುಟ್ಟು ಹಾಕುವುದಾಗಿ ಬೆದರಿಸಿರುವ ಘಟನೆ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಹೊನ್ನೇನಹಳ್ಳಿಯ ಸರ್ವೇ ನಂ.೫೧ ಜಮೀನು ಮಾಲೀಕರಾದ ರಾಜಣ್ಣ ಎಂಬುವರು ತಮ್ಮ ಜಮೀನನ ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್ನಿಂದ ಜಮೀನು ಹದಗೊಳಿಸಲು ಮುಂದಾದಾಗ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಚಂದ್ರಶೇಖರ್ ಏಕಾಏಕಿ ರೈತನ ಬಳಿ ತೆರಳಿ ಈ ಜಮೀನು ತನಗೆ ಸೇರಿದ್ದಾಗಿ ತಗಾದೆ ತೆಗೆದು ಉಳುಮೆಗೆ ತಡೆಯೊಡ್ಡಿದ್ದಾರೆ.
ಅಲ್ಲದೆ ಉಳುಮೆ ಮಾಡಲು ಮುಂದಾದ್ರೆ ಸ್ಥಳದಲ್ಲಿ ಟ್ರ್ಯಾಕ್ಟರ್ ಸಮೇತ ನಿಮ್ಮನ್ನು ಪೆಟ್ರೋಲ್ ನಿಂದ ಸುಟ್ಟು ಹಾಕೋದಾಗಿ ಕೊಲೆ ಬೆದರಿಕೆ ಒಡ್ಡಿ ಆವಾಜ್ ಹಾಕಿದ್ದಾರೆ. ಮಾಜಿ ಶಾಸಕರ ಕ್ರಮ ಖಂಡಿಸಿ ರೈತ ರಾಜಣ್ಣ ಪಟ್ಟಣದ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಆದ್ರೆ ಪೊಲೀಸಲು ಮಾಜಿ ಶಾಸಕರ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದು ರೈತ ಸೇರಿದಂತೆ ಸಾರ್ವಜನಿಕರಿಂದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.