ಭೀಕರ ರಸ್ತೆ ಅಪಘಾತದದಲ್ಲಿ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಸಾವನ್ನಪ್ಪಿದ್ದಾರೆ.
ಬಾಗಲಕೋಟೆ : ಭೀಕರ ರಸ್ತೆ ಅಪಘಾತದದಲ್ಲಿ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಸಾವನ್ನಪ್ಪಿದ್ದಾರೆ. ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರು ನಿಧನರಾಗಿದ್ದಾರೆ.
ತುಳಸಿಗೇರಿ ಬಳಿಯಲ್ಲಿ ಕಾರು ಪಲ್ಟಿಯಾಗಿ ಟೈರ್ ಬ್ಲಾಸ್ಟ್ ಆಗಿದ್ದು ಈ ವೇಳೆ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಹೆಗಡೆ ವಿರುದ್ಧ ಗೆದ್ದ ಹೆಗ್ಗಳಿಕೆ : 2013 ಹಾಗೂ 2018ರಲ್ಲಿ ಜಮಖಂಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿದ್ದರು. 1991ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ನ್ಯಾಮಗೌಡ ಅವರು ಕೇಂದ್ರ ಕಲ್ಲಿದ್ದಲು ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಕೃಷ್ಣ ತೀರ ರೈತ ಸಂಘದ ಮೂಲಕ ರೈತ ಪರ ಕಾರ್ಯಕ್ಕೆ ಖ್ಯಾತಿಯಾಗಿದ್ದ ಅವರು ರೈತರ ಶ್ರಮ ಹಾಗು ಆರ್ಥಿಕ ನೆರವಿನಿಂದ ಎರಡು ಬ್ಯಾರೇಜ್ ನಿರ್ಮಾಣ ಮಾಡಿ, ಜಮಖಂಡಿ ಹಾಗೂ ಅಥಣಿ ತಾಲೂಕಿಗೆ ಅನೂಕಲ ಒದಗಿಸಿದ್ದರು.
ಅಂದು ಮುಖ್ಯಮಂತ್ರಿಯಾಗಿದ್ದ ನಾಯಕ ಬಂಗಾರಪ್ಪ ಅವರು ರೈತ ನಾಯಕ ಎಂದು ಗುರುತಿಸಿ ನ್ಯಾಮಗೌಡ ಅವರಿಗೆ ಟಿಕೆಟ್ ಕೊಡಿಸಿದ್ದರು. ಈ ವೇಳೆಯೇ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ನ್ಯಾಮಗೌಡ ಅವರು ವಿಜಯಿಯಾಗಿದ್ದರು. ಈ ಬಾರಿ ಜಮಖಂಡಿಯಿಂದ ಸ್ಪರ್ಧಿಸಿ ವಿಜಯಿಯಾಗಿದ್ದ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಇತ್ತು - ಆದರೆ ಕಾರು ಅಪಘಾತದಲ್ಲಿ ಅಕಾಲಿಕವಾಗಿ ಸಿದ್ದು ನ್ಯಾಮಗೌಡ ನಿಧನರಾಗಿದ್ದಾರೆ.
ಗಣ್ಯರ ಕಂಬನಿ :
