ಹ್ಯಾರೀಸ್ ಪುತ್ರ ಆಯ್ತು ಈಗ ಇನ್ನೊಬ್ಬ ಕಾಂಗ್ರೆಸ್ ಶಾಸಕನ ಸಹೋದರನಿಂದ ಗೂಂಡಾಗಿರಿ

Congress MLA Brother Gundagiri Video become Viral
Highlights

ಶಾಸಕರ ಹ್ಯಾರಿಸ್ ಪುತ್ರನ ಗೂಂಡಗಿರಿಯ ಬಳಿಕ ಇದೀಗ ಮತ್ತೊಬ್ಬ ಕಾಂಗ್ರೆಸ್ ಶಾಸಕನ ಸಹೋದರ ನ ಗೂಂಡಾಗಿರಿ ಪ್ರಕರಣ ಬಯಲಾಗಿದೆ‌. ಪ್ರತಿಭಟನೆ ಸಂಧರ್ಭದಲ್ಲಿ ಅಡ್ಡ ಬಂದಿದಕ್ಕೆ ವ್ಯಕ್ತಿಯೋರ್ವನಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು (ಫೆ.23): ಶಾಸಕರ ಹ್ಯಾರಿಸ್ ಪುತ್ರನ ಗೂಂಡಗಿರಿಯ ಬಳಿಕ ಇದೀಗ ಮತ್ತೊಬ್ಬ ಕಾಂಗ್ರೆಸ್ ಶಾಸಕನ ಸಹೋದರನ ಗೂಂಡಾಗಿರಿ ಪ್ರಕರಣ ಬಯಲಾಗಿದೆ‌. ಪ್ರತಿಭಟನೆ ಸಂಧರ್ಭದಲ್ಲಿ ಅಡ್ಡ ಬಂದಿದಕ್ಕೆ ವ್ಯಕ್ತಿಯೋರ್ವನಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ಕಾಂಗ್ರೆಸ್  ಶಾಸಕ ಸಿ ಎಸ್ ಶಿವಳ್ಳಿ ಸಹೋದರ ಮತ್ತು ಆತನ ಸಹಚರರು ವ್ಯಕ್ತಿಯೋರ್ವನ ಮೇಲೆ  ಹಲ್ಲೆ  ನಡೆಸಿದ್ದಾರೆ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಸಿ ಎಸ್ ಶಿವಳ್ಳಿ ಸಹೋದರ ಅಡಿವೆಪ್ಪಾ ಶಿವಳ್ಳಿ ಮತ್ತು ಸಹಚರರಿಂದ ಈ ಗೂಂಡಗಿರಿ ನಡೆದಿದೆ. ಮೂರ್ನಾಲ್ಕು ಜನರು ಸೇರಿ ಮನಬಂದಂತೆ ವ್ಯಕ್ತಿಗೆ ಥಳಿಸುತ್ತಿರುವ  ವಿಡಿಯೋ ವೈರಲ್ ಆಗಿದೆ‌. 

loader