ಬೆಂಗಳೂರು(ಡಿ.01)  ಸಚಿವ ಸಂಪುಟ ವಿಸ್ತರಣೆ ಡಿಸೆಂಬರ್ 10 ರೊಳಗೆ ಆಗಬೇಕು. ಇದು ನಮ್ಮೆಲ್ಲ ಶಾಸಕರ ಒತ್ತಾಯವಾಗಿದೆ. ಸಂಪುಟ ವಿಸ್ತರಣೆ ಮಾಡಿ ಅಂತ ನಮ್ಮ ನಾಯಕರಿಗೆ ತಿಳಿಸಿದ್ದೇವೆ ಎಂದು ಶಾಸಕ ಬಿ.ಸಿ.ಪಾಟೀಲ್ ಒತ್ತಾಯ ಮಾಡಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ನಾಯಕರು ತೀರ್ಮಾನ ತಗೋತಾರೆ.  ನನಗೂ ಸ್ಥಾನ ಸಿಗುವ ವಿಶ್ವಾಸ ಇದೆ. ವಿಸ್ತರಣೆ ಕುರಿತು ಡಿಸೆಂಬರ್ 5 ರ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದುಗೆ ಜೈ ಎಂದು 6 ತಿಂಗಳ ನಂತರ ಪೋಸ್ಟ್‌ಮಾರ್ಟಂ ಮಾಡಿದ ಎಂಬಿಪಿ

ಕ್ಷೇತ್ರದ ಸಮಸ್ಯೆ ಬಗ್ಗೆ ಮಾತಾಡಲು ಸಿಎಂ ಬಳಿ ಬಂದಿದ್ದೆ. ಸಿಎಂ ಜೊತೆ ನಾನು ಸಂಪುಟ ವಿಸ್ತರಣೆ ಬಗ್ಗೆ ಮಾತಾಡಿಲ್ಲ. ಡಿಸೆಂಬರ್ 8 ರಂದು ಶಾಸಕರ ಸಭೆ ನಡೆಯುತ್ತಿದೆ,. ಸಿಎಂ ಆ ಸಭೆಯಲ್ಲಿ ನಮ್ಮ ಜೊತೆ ಮಾತಾಡಲು ಬಂದ್ರೆ ಒಳ್ಳೆಯದು. ಆಗ ಶಾಸಕರು ತಮ್ಮ ಮನಸಲ್ಲಿ ಇರೋದನ್ನು ಸಿಎಂ ಜೊತೆಯೂ ಹಂಚಿಕೊಳ್ಳಬಹುದು ಎಂದು ಪಾಟೀಲ್ ಹೇಳದ್ದಾರೆ.