ಹಾವೇರಿ(ಮಾ. 07)  ಶಾಸಕ ಬಿಸಿ ಪಾಟೀಲ್  ಪುತ್ರಿಗೆ   ಹಾವೇರಿ ಲೋಕ ಕ್ಷೇತ್ರ "ಕೈ"ಟಿಕೆಟ್ ಸಿಗಲಿದೆಯೇ? ಎಂಬ ಪ್ರಶ್ನೆಗೆ ಒಂದೊಂದೆ ಉತ್ತರಗಳು ಸಿಗುತ್ತಲಿವೆ.

ಸಚಿವ ಸ್ಥಾನ ನೀಡದ ಹಿನ್ನೆಲೆ ಅಸಮಾಧಾನಗೊಂಡಿದ್ದ ಬಿ.ಸಿ.ಪಾಟೀಲರನ್ನು ತಣ್ಣಗಾಗಿಸಲು  ಟಿಕೆಟ್ ನೀಡಲು ಮುಂದಾಗಿದೆ ಎಂಬ ಮಾತು ಕೇಳಿ ಬಂದಿದೆ.  ಬಿ.ಸಿ.ಪಾಟೀಲ್ ಪುತ್ರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಪಕ್ಕಾ ಎನ್ನಲಾಗಿದೆ. 

ಬಿಜೆಪಿ ಪರ ಸುಮಲತಾ ಒಲವು? ಬಿಎಸ್‌ವೈ ಹೇಳೋದೇನು?

ಪುತ್ರಿಗೆ ಟಿಕೆಟ್ ನೀಡುವಂತೆ ಶಾಸಕ ಬಿ.ಸಿ.ಪಾಟೀಲ್ ಬೇಡಿಕೆ ಇಟ್ಟಿದ್ದಾರೆ.  ಹೈಕಮಾಂಡ್ ಗೆ ಈಗಾಗಲೇ ಮನವಿ ಸಲ್ಲಿಸಿರೋ ಕೌರವ ಮಗಳು ಸೃಷ್ಟಿ ಪಾಟೀಲ್ ಗೆ ಟಿಕೆಟ್ ಕೇಳಿದ್ದಾರೆ. ಸೃಷ್ಟಿ ಪಾಟೀಲ್  ಸೇರಿ  5  ಜನ ವೀರಶೈವ ಆಕಾಂಕ್ಷಿಗಳ ಲಿಸ್ಟ್ ಸಲ್ಲಿಕೆಯಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಲಿಸ್ಟ್ ಸಲ್ಲಿಸಿರೋ ಪಾಟೀಲ್   ಹಿರೇಕೆರೂರು ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಪುತ್ರಿ ಸಹ ಸಭೆಯಲ್ಲಿ ಪಾಲ್ಗೊಂಡಿದ್ದು ಮುಂದಿನ ಬೆಳವಣಿಗಗಳ ಬಗ್ಗೆ ಚರ್ಚೆ ಮಾಡಲಾಗಿದೆ.