ಕಲಬುರಗಿ, (ಮಾ.10): ಪರಿಶಿಷ್ಟ ಜಾತಿ (SC) ಮೀಸಲು ಕಲಬುರಗಿ ಕ್ಷೇತ್ರ ಈ ಬಾರಿ ರಂಗೇರಿದೆ. ಹಾಲಿ ಸಂಸದ, ಕಾಂಗ್ರೆಸ್‌ನ ಪ್ರಬಲ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ಕಾಡತೊಡಗಿದೆ. 

 ಪುತ್ರ ವ್ಯಾಮೋಹದ ವಿರೋಧ ಅಲೆ ಇದ್ದು, ಈ ಬಾರಿ ಕಲಬುರಗಿಯಲ್ಲಿ ಕಮಲದ ಅಲೆ ಜೋರಾಗಿದೆ. ಮತ್ತೊಂದೆಡೆ ಸ್ವಪಕ್ಷೀಯ ನಾಯಕರುಗಳಿಗೂ ಸಹ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸಮಾಧಾನಗೊಂಡಿದ್ದಾರೆ. 

'ಲೋಕ'ಸಮರ: ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ರೆಡಿಯಾಯ್ತು ಸ್ಪೆಷಲ್ ಟೀಂ..!

ಪುತ್ರ ಪ್ರಿಯಾಂಕ ಖರ್ಗೆಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದೇ ಮಲ್ಲಿಕಾರ್ಜುನ ಖರ್ಗೆ ಮೇಲೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಮುನಿಸಿಕೊಂಡಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಹಲವು ನಾಯಕರು ಕಾಂಗ್ರೆಸ್ ತೊರೆದಿದನ್ನು ಇಲ್ಲಿ ಸ್ಮರಿಸಬಹುದು. ಇದೀಗ ತಂದೆಯ ಕುಚುಕು ಗೆಳೆಯ ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಮಾಜಿ ಸಿಎಂ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಮುಂದಾದ್ರಾ ಎಂದು ಕಾಂಗ್ರೆಸ್‌ನಲ್ಲಿ ಚರ್ಚೆ ಶುರುವಾಗಿದೆ.

ಸೆಡ್ಡು ಹೊಡೆದ ಉಮೇಶ್ ಜಾಧವ್, ಮಲ್ಲಿಕಾರ್ಜುನ ಖರ್ಗೆ ಅನುಭವದ ಆಟ

ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಉಮೇಶ್ ಜಾಧವ್ ಅವರು,  ನನ್ನ ಬಳಿಯೂ ಅಸ್ತ್ರಗಳಿವೆ. ಸಮಯ ಬಂದಾಗ ಪ್ರಯೋಗಿಸುತ್ತೇನೆ ಎನ್ನುವ ಫೇಸ್ಬುಕ್ ಸ್ಟೇಟಸ್ ಹಾಕಿಕೊಂಡಿದ್ದರು.

ಈ ಸ್ಟೇಟಸ್‌ಗೆ ಶಾಸಕ ಅಜಯ್ ಸಿಂಗ್ ಫೇಸ್ಬುಕ್ ಖಾತೆಯಿಂದ ‘ಗ್ರೇಟ್ ಜಾಧವ್ ಜೀ’ ಎಂದು ಕಮೆಂಟ್ ಮಾಡುವ ಮೂಲಕ ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ನಿಂತ್ರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಕಾಂಗ್ರೆಸ್ ತೊರೆದ ಮಾಜಿ ಸಚಿವ
ಶಾಸಕ ಅಜಯ್ ಸಿಂಗ್ ಸ್ಟೇಟಸ್ ಕೆಲ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟು ಮಾಡಿದ ಬೆನ್ನಲ್ಲೇ ಮಾಜಿ ಸಚಿವ ಹಾಗೂ 370(ಜೆ) ಕಲಂ ಹೋರಾಟದ ರೂವಾರಿ ವೈಜನಾಥ್ ಪಾಟೀಲ್ ಇಂದು (ಭಾನುವಾರ) ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ್ದು, ಖರ್ಗೆಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.