ಎಂ ಎಲ್ ಸಿ ಆದಮೇಲೆ ತಮ್ಮ ತಮ್ಮ ಜಿಲ್ಲೆ ಕಡೆ ತಿರುಗಿ ನೊಡೊಲ್ಲ ಅಂತಾ ವಿಧಾನ ಸಭಾ ಸದಸ್ಯರೊಬ್ಬರ ವಿರುದ್ಧ ಅದೇ ಪಕ್ಷದ ಕಾರ್ಯಕರ್ತರು ತಿರುಗಿಬಿದ್ದರು. ಆ ಕಾರ್ಯಕರ್ತರ ಬಗ್ಗೆ ಜಾವಬ್ದಾರಿಯುತ ಸಚಿವರು ಪ್ರತಿಕ್ರಯಿಸಿ ಅವರೆಲ್ಲಾ ವೇಸ್ಟ್ ಬಾಡಿಗಳು ಅಂದ್ರು. ಸಚಿವರ ಹೇಳಿಕೆಯಿಂದ ಕೆಂಡಮಂಡಲವಾದ ಕಾರ್ಯಕರ್ತರು ದಂಡ ಪಿಂಡಗಳು ನಾವು ವೇಸ್ಟ್ ಬಾಡಿಗಳು ಅಂತಾ ಭಜನೆ ಶುರು ಮಾಡೇ ಬಿಟ್ರು

ಚಿತ್ರದುರ್ಗ(ಆ.07): ಜಿಲ್ಲೆಯತ್ತ ಮುಖ ಮಾಡವ ಪರಿಷತ್ ಸದಸ್ಯರ ವಿರುದ್ಧ ಆಕ್ರೋಶ, ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರನ್ನ ವೇಸ್ಟ್ ಬಾಡಿಗಳು ಎಂದ ಸಚಿವರು. ಮಿನಿಸ್ಟರ್ ಹೇಳಿಕೆಗೆ ವಿರುದ್ಧ ಭಜನೆ ಮಾಡಿದ ಕೈ ಕಾರ್ಯಕರ್ತರು. ಇದೆಲ್ಲಾ ನಡೆದದ್ದು ಕೋಟೆ ನಾಡು ಚಿತ್ರದುರ್ಗದಲ್ಲಿ.

ಮೈಸೂರು ಮೂಲದ ಉದ್ಯಮಿ ರಘು ಆಚಾರ್ ಈ ಹಿಂದೆ ಪರಿಷತ್ ಸ್ಥಾನಕ್ಕೆ ಕೋಟೆ ನಾಡು ಚಿತ್ರದುರ್ಗದಿಂದ ಸ್ಪರ್ಧೆ ಮಾಡಿ ಜಯಗಳಿಸಿದ್ರು. ಒಂದು ವರ್ಷ ಕಳೆದರೂ ಅತ್ತ ತಲೆ ಹಾಕದ ರಘು ಆಚಾರ್ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ರು. ಈ ವೇಳೆ ಎಂಎಲ್‌ಸಿ ವಿರುದ್ದ ತಿರುಗಿ ಬಿದ್ದ ಕಾಂಗ್ರಸ್ ಯುವ ಮುಖಂಡರುಗಳು ಹಿಗ್ಗಾಮಗ್ಗಾ ತರಾಟೆ ತೆಗೆದುಕೊಂಡ್ರು. ಈ ಬಗ್ಗೆ ಹಿರಿಯೂರಿನಲ್ಲಿಪ್ರತಿಕ್ರಯಿಸಿದ ಸಚಿವ ಆಂಜನೇಯ ಕಾಂಗ್ರಸ್ ಕಚೇರಿಯಲ್ಲಿ ಗಲಾಟೆ ಮಾಡಿರೋರೆಲ್ಲಾ ವೇಸ್ಟ್ ಬಾಡಿಗಳು ಅಂದ್ರು

ಇನ್ನೂ ಆಂಜನೇಯ ಅವರ ವೇಸ್ಟ್ ಬಾಡಿಗಳು ಅನ್ನೋ ಮಾತು ಕೇಳಿ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗದ ಜಿಲ್ಲಾ ಕಾಂಗ್ರಸ್ ಕಚೇರಿ ಬಳಿ ದಂಡಪಿಂಡಗಳು ನಾವು ವೇಸ್ಟು ಬಾಡಿಗಳು ಅಂತಾ ಭಜನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ರಘು ಆಚಾರ್ ಮಾತ್ರ ನನ್ನ ವಿರುದ್ಧ ಯಾರೂ ಮಾತನಾಡಲೇ ಇಲ್ಲ ಎಂದರು.

ಒಟ್ಟಾರೆಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಈಗಾಗಲೇ ಭಿನ್ನ ಮತ ಶುರುವಾಗಿದ್ದು ಪ್ರಭಾವಿ ಮುಖಂಡರ ನಡೆ ಒಂದಾದ್ರೆ ಕಾರ್ಯಕರ್ತರ ನಡೆ ಮತ್ತೊಂದು ಅನ್ನುಂತಿದೆ. ಇದನ್ನೆಲ್ಲಾ ನೋಡಿದ್ರೆ ಮುಂಬರುವ ಚುನಾವಣೆ ವೇಳೆಗೆ ಕಾಂಗ್ರೆಸ್‌ನ ಸ್ಥಿತಿ ಏನಾಗಬಹುದೋ ಅಂತ ಕಾಂಗ್ರೆಸ್ ನ ಕಟ್ಟಾ ಅಭಿಮಾನಿಗಳು ಆತಂಕಗೊಂಡಿದ್ದಾರೆ.