ಇಂದು ಕೆಪಿಸಿಸಿ ಕಚೇರಿಯಲ್ಲಿ  ನಡೆದ ನೆಹರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಕಾಂಗ್ರಸ್​ ಕಾರ್ಯಕರ್ತೆ ಮಂಜುಳಾ , ಇಂದಿರಾಗಾಂಧಿ ಇಂದಿರಾಗಾಂಧಿ ಮತ್ತು ಸೋನಿಯಾ ಗಾಂಧಿ ಕಟ್ಟಿದ ಪಕ್ಷದಲ್ಲಿ ಇಂತಹ ಘಟನೆ ನಡೆಯಲು ಕಾರಣವಾದ ಸೇಠ್ ಅವರ  ವಿರುದ್ಧ ಕೂಡಲೆ ಕ್ರಮಕೈಗೊಳ್ಳಿ ಎಂದು ಡಾ.ಜಿ.ಪರಮೇಶ್ವರ್​ಗೆ ಮನವಿ ಮಾಡಿದ್ದಾರೆ.

ಬೆಂಗಳೂರು(ನ.14): ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ವಿರುದ್ದ ಕೈಗೊಳ್ಳುವಂತೆ ಪಕ್ಷದಲ್ಲೇ ಅಪಸ್ವರ ಎದ್ದು ಕಾಣುತ್ತಿದೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ನೆಹರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಕಾಂಗ್ರಸ್​ ಕಾರ್ಯಕರ್ತೆ ಮಂಜುಳಾ , ಇಂದಿರಾಗಾಂಧಿ ಇಂದಿರಾಗಾಂಧಿ ಮತ್ತು ಸೋನಿಯಾ ಗಾಂಧಿ ಕಟ್ಟಿದ ಪಕ್ಷದಲ್ಲಿ ಇಂತಹ ಘಟನೆ ನಡೆಯಲು ಕಾರಣವಾದ ಸೇಠ್ ಅವರ ವಿರುದ್ಧ ಕೂಡಲೆ ಕ್ರಮಕೈಗೊಳ್ಳಿ ಎಂದು ಡಾ.ಜಿ.ಪರಮೇಶ್ವರ್​ಗೆ ಮನವಿ ಮಾಡಿದ್ದಾರೆ.

ಭಾಷಣದ ವೇಳೆ ಸನ್ನೆ ಮೂಲಕ ಬಲವಂತವಾಗಿ ಕುಳಿತುಕೊಳ್ಳುವಂತೆ ಸೂಚಿಸಿದರೂ ಕೂಡ ಕೂರದೇ ತಮ್ಮ ಮಾತನ್ನು ಸಭೆಯಲ್ಲಿ ಮುಂದುವರೆಸಿದರು. ಇನ್ನು ಮಂಜುಳಾ ಮನವಿಗೆ ಸಭೆಯಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದರು.