ಚುನಾವಣಾ ವರ್ಷದಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಗಣಿ ಗದ್ದಲ ಸದ್ದು ಮಾಡಲಿದೆಯಾ ಎಂಬ ಅನುಮಾನ ಕಾಡಲಾರಂಭಿಸಿದೆ. ಸಿಬಿಐ ಕೈಬಿಟ್ಟಿದ್ದ ಅಕ್ರಮ ಅದಿರು ಸಾಗಾಟ ಪ್ರಕರಣ ರಾಜ್ಯ ಸರ್ಕಾರ ಎಸ್'ಐಟಿಗೆ ವಹಿಸಲು ಚಿಂತನೆ ನಡೆಸಿರುವುದೇ ಅನುಮಾನಕ್ಕೆ ಕಾರಣವಾಗಿದೆ.

ಬೆಂಗಳೂರು(ಅ.04): ಚುನಾವಣಾ ವರ್ಷದಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಗಣಿ ಗದ್ದಲ ಸದ್ದು ಮಾಡಲಿದೆಯಾ ಎಂಬ ಅನುಮಾನ ಕಾಡಲಾರಂಭಿಸಿದೆ. ಸಿಬಿಐ ಕೈಬಿಟ್ಟಿದ್ದ ಅಕ್ರಮ ಅದಿರು ಸಾಗಾಟ ಪ್ರಕರಣ ರಾಜ್ಯ ಸರ್ಕಾರ ಎಸ್'ಐಟಿಗೆ ವಹಿಸಲು ಚಿಂತನೆ ನಡೆಸಿರುವುದೇ ಅನುಮಾನಕ್ಕೆ ಕಾರಣವಾಗಿದೆ.

ಈ ಮದಲು ಎರಡು ಮಹತ್ವದ ಪ್ರಕರಣಗಳಾದ ಕಾರವಾರ ಮತ್ತು ಮಂಗಳೂರು ಬಂದರಿನಲ್ಲಿ ಅಕ್ರಮ ರಫ್ತು ಪ್ರಕರಣಗಳನ್ನು ಸಿಬಿಐ ಕೈ ಬಿಟ್ಟಿತ್ತು ಆದರೀಗ ಸಹಸ್ರಾರು ಕೋಟಿ ಪ್ರಕರಣದ ಹಿಂದೆ ಕಳ್ಳ ಕುಳಗಳಿವೆ ಎಂದು ಎಸ್'ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ನರೇಂದ್ರ ಮೋದಿ ಮತ್ತು ಅಮಿತ್ ಷಾ ಜೊತೆ ಇರುವ ಉದ್ಯಮಿಗಳು ಈ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂಬ ಕಾರಣಕ್ಕೆ ಸಿಬಿಐ ತನಿಖೆ ಕೈಬಿಡಲಾಗಿದೆ ಎಂಬ ನಿಲುವಿಗೆ ರಾಜ್ಯ ಸರ್ಕಾರ ಬಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಚಿವ ಸಂಪುಟ ಉಪ ಸಮಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್'ಐಟಿ ತನಿಖೆಗೆ ಶಿಫಾರಸು ಮಾಡಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಎಸ್'ಐಟಿ ತನಿಖೆ ತೀರ್ಮಾನವಾಗುವ ಸಾಧ್ಯತೆಗಳಿವೆ.

ಈ ಮೂಲಕ ಉದ್ಯಮಿಗಳ ಮೇಲೆ ಎಸ್ ಐಟಿ ಅಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಬಿಜೆಪಿಯ ಹಣ ಬಲಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಅಲ್ಲದೇ ಬಿಜೆಪಿಯ ಐಟಿ ಅಸ್ತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್'ನ ಈ ಶಸ್ತ್ರ ಪ್ರಯೋಗಿಸಲಾಗಿದೆ ಎಂದೂ ಹೇಳಲಾಗುತ್ತಿದೆ.