Asianet Suvarna News Asianet Suvarna News

ವಿಧಾನಪರಿಷತ್‌ ಚುನಾವಣೆಗೆ ಕಾಂಗ್ರೆಸ್ ಪಟ್ಟಿ ಫೈನಲ್

ತೀವ್ರ ಕುತೂಹಲ ಮೂಡಿಸಿರುವ ಮೂರು ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ವಿಧಾನಪರಿಷತ್‌ ನಾಮನಿರ್ದೇಶನ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಹೈಕಮಾಂಡ್‌ನಿಂದ ಪ್ರಕಟಣೆ ಮಾತ್ರ ಬಾಕಿಯಿದೆ. 

Congress List Final for Legislative Council Elections
Author
Bengaluru, First Published Sep 21, 2018, 8:24 AM IST

ಬೆಂಗಳೂರು, [ಸೆ.21]: ತೀವ್ರ ಕುತೂಹಲ ಮೂಡಿಸಿರುವ ಮೂರು ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ.

ವಿಧಾನಪರಿಷತ್‌ ನಾಮನಿರ್ದೇಶನ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಹೈಕಮಾಂಡ್‌ನಿಂದ ಪ್ರಕಟಣೆ ಮಾತ್ರ ಬಾಕಿಯಿದೆ. 

ಮೂಲಗಳ ಪ್ರಕಾರ ವಿಧಾನಪರಿಷತ್‌ ಚುನಾವಣೆಗೆ ಕೋಲಾರದ ನಜೀರ್‌ ಅಹಮದ್‌ ಅಥವಾ ಎಂ.ಎಂ. ಹಿಂಡಸಗೇರಿ (ಈ ಪೈಕಿ ನಜೀರ್‌ ಅವರಿಗೆ ಹೆಚ್ಚಿನ ಅವಕಾಶವಿದೆ) ಹಾಗೂ ಜಯನಗರದ ಎಂ.ಸಿ. ವೇಣುಗೋಪಾಲ್‌ ಅಥವಾ ಯು.ಬಿ ವೆಂಕಟೇಶ್‌ ಅವರ ಹೆಸರನ್ನು ರಾಜ್ಯ ನಾಯಕರು ಹೈಕಮಾಂಡ್‌ಗೆ ನೀಡಿದ್ದಾರೆ. 

 ಈ ಹಿಂದೆ ಎಂಎಲ್‌ಸಿಗಳಾಗಿದ್ದ ಡಾ.ಜಿ. ಪರಮೇಶ್ವರ್. ಕೆ.ಎಸ್. ಈಶ್ವರಪ್ಪ ಹಾಗೂ ವಿ.ಸೋಮಣ್ಣ ಈ ಮೂವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇದ್ರದಿಂದ ಇವರ ಸ್ಥಾನಗಳಿಗೆ ಅಕ್ಟೋಬರ್ 4ರಂದು ವಿಧಾನಸಭೆಯಿಂದ ಪರಿಷತ್ತಿಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.

ಇನ್ನು ನಾಮನಿರ್ದೇಶನ ಮಾಡುವ ಎರಡು ಸ್ಥಾನಗಳಿಗೆ ಮುಖ್ಯಮಂತ್ರಿ ಚಂದ್ರು, ಬರಗೂರು ರಾಮಚಂದ್ರಪ್ಪ ಹಾಗೂ ವಿ.ಆರ್‌. ಸುದರ್ಶನ್‌ ಈ ಮೂವರ ಹೆಸರನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. 

ರಾಜ್ಯ ನಾಯಕರು ಈ ಹೆಸರಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದಾರೆ. ಆದರೆ, ಅಂತಿಮ ತೀರ್ಮಾನವನ್ನು ಹೈಕಮಾಂಡ್‌ ತೆಗೆದುಕೊಳ್ಳಬೇಕಿದೆ. ಹೈಕಮಾಂಡ್‌ ಕೆಲ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಲು ಮುಂದಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios