ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯ ಪಟ್ಟಾಭಿಷೇಕ ನಡೆಯುವುದು ನಿಚ್ಚಳವಾಗಿದೆ. ಪಕ್ಷದ ನೂತನ ಅಧ್ಯಕ್ಷರ ಚುನಾವಣೆಯ ವೇಳಾಪಟ್ಟಿ ನಿಗದಿಪಡಿಸುವ ಬಹುನಿರೀಕ್ಷಿತ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಾಳೆ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯ ಪಟ್ಟಾಭಿಷೇಕ ನಡೆಯುವುದು ನಿಚ್ಚಳವಾಗಿದೆ. ಪಕ್ಷದ ನೂತನ ಅಧ್ಯಕ್ಷರ ಚುನಾವಣೆಯ ವೇಳಾಪಟ್ಟಿ ನಿಗದಿಪಡಿಸುವ ಬಹುನಿರೀಕ್ಷಿತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಾಳೆ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಅತ್ಯುನ್ನತ ನಿರ್ಧಾರಕ ಮಂಡಳಿಯಾದ ಸಿಡಬ್ಲ್ಯುಸಿ, 10ನೇ ಜನಪಥದಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಈ ಸಭೆಯಲ್ಲಿ ಹಾಲಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಏರುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಕಾಂಗ್ರೆಸ್, ರಾಹುಲ್ ಅವರೊಬ್ಬರೇ ಈ ಹುದ್ದೆಯ ಅಭ್ಯರ್ಥಿಯಾಗಿರುವುದರಿಂದ ನೇರ ಆಯ್ಕೆ ಮಾಡಬಹುದಿತ್ತಾದರೂ ಸೋನಿಯಾ ಗಾಂಧಿ ಅವರು ಆಧ್ಯಕ್ಷೀಯ ಚುನಾವಣೆಗೆ ಸಿಡಬ್ಲ್ಯುಸಿಯ ಅಂಗೀಕಾರವನ್ನು ಪಡೆಯುವ ಉದ್ದೇಶದಿಂದ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು ಈಗ ಪುತ್ರ ರಾಹುಲ್ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಗುಜರಾತ್ ಚುನಾವಣೆಗೂ ಮುನ್ನ ರಾಹುಲ್ ಪಟ್ಟಾಭಿಷೇಕವಾಗುವ ಸಾಧ್ಯತೆಗಳು ದಟ್ಟವಾಗಿವೆ.
