Asianet Suvarna News Asianet Suvarna News

ದೇಶಭಕ್ತ ಮಹನೀಯರ(?)ರ ಕೈಯಲ್ಲಿ ISI ಏಜೆಂಟ್ ಪುಸ್ತಕ!

ಮಹಾನ್ ದೇಶಭಕ್ತರ ಕೈಯಲ್ಲಿ ಪಾಕಿ ಪುಸ್ತಕ| ಮಾಜಿ ಐಎಸ್‌ಐ ಮುಖ್ಯಸ್ಥನ ಪುಸ್ತಕ ಬಿಡುಗಡೆ| ಮಾಜಿ ಪ್ರಧಾನಿ ಮನಮೋಹನ್ ಸಿಂಗ್,  ಹಮೀದ್ ಅನ್ಸಾರಿ, ಫಾರೂಕ್ ಅಬ್ದುಲ್ಲಾ| ಮಾಜಿ ಐಎಸ್‌ಐ ಮುಖ್ಯಸ್ಥ ಅಸದ್ ಅನ್ಸಾರಿ ರಚಿತ ಪುಸ್ತಕ|ಅಸದ್ ಅನ್ಸಾರಿಗೆ ಭಾರತ ಪ್ರವೇಶಕ್ಕೆ ನಿಷೇಧ
 

Congress Leaders Released Book Written by Former ISI Cheif
Author
Bengaluru, First Published Dec 27, 2018, 3:54 PM IST

ನವದೆಹಲಿ(ಡಿ.27): ಈ ಸುದ್ದಿ ಓದುವ ಮುನ್ನ ಈ ಫೋಟೋವನ್ನೊಮ್ಮೆ ಸರಿಯಾಗಿ ನೋಡಿ. ಇದರಲ್ಲಿರುವುದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಇತರ ಪ್ರಮುಖರು.

ಇವರೆಲ್ಲಾ ರಾಷ್ಟ್ರ ರಾಜಧಾನಿ ನವದೆಹಲಿಯ 5 ಸ್ಟಾರ್ ಹೋಟೆಲ್‌ನಲ್ಲಿ ಸೇರಿದ್ದು ಯಾತಕ್ಕಾಗಿ ಗೊತ್ತಾ?. ಅವರ ಕೈಯಲ್ಲಿರೋ ಪುಸ್ತಕದತ್ತ ದೃಷ್ಟಿ ಹರಿಸಿದರೆ ನಿಮಗೆ ಗೊತ್ತಾಗುತ್ತದೆ. ಕಳೆದ ಮೇ.24ರಂದು ನಡೆದಿದ್ದ ಈ ಸಮಾರಂಭ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಐಎಸ್‌ಐ ಮಾಜಿ ಮುಖ್ಯಸ್ಥನ ಪುಸ್ತಕ ಭಾರತದಲ್ಲಿ ಬಿಡುಗಡೆಗೊಳಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಅಸದ್ ಅನ್ಸಾರಿ ಪುಸ್ತಕವನ್ನು ಕಳೆದ ಮೇ.24ರಂದೇ ಬಿಡುಗಡೆ ಮಾಡಲಾಗಿದ್ದು, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮಾಜಿ ಮುಖ್ಯಸ್ಥ ಅಸದ್ ದುರಾನಿ ಬರೆದಿರುವ ಪುಸ್ತಕವನ್ನು ಇವರೆಲ್ಲಾ ಸೇರಿ ಬಿಡುಗಡೆ ಮಾಡಿದ್ದಾರೆ.

ಐಎಸ್‌ಐ ಭಾರತದ ಪರಮೋಚ್ಛ ದುಷ್ಮನ್. ಭಾರತದ ವಿರುದ್ಧ ಸದಾ ಷಡ್ಯಂತ್ರ ನಡೆಸುವ ಐಎಸ್‌ಐ, ಭಾರತದಲ್ಲಿ ನಡೆಸಿದ ರಕ್ತಪಾತಕ್ಕೆ ಲೆಕ್ಕವೇ ಇಲ್ಲ.

ಆದರೆ ಭಾರತ ಮತ್ತು ಭಾರತದ ಸುರಕ್ಷತೆ ಕುರಿತು ಯೋಚಿಸಬೇಕಾದ ಈ ಎಲ್ಲಾ ಮಹನೀಯರು, ಐಎಸ್‌ಐ  ಮಾಜಿ ಮುಖ್ಯಸ್ಥನೋರ್ವನ ಪುಸ್ತಕ ಬಿಡುಗಡೆ ಮಾಡಿದ್ದಾರೆ.

ಯಾರು ಅಸದ್ ದುರಾನಿ?:
ಅಸದ್ ದುರಾನಿ ಐಎಸ್‌ಐ ಮಾಜಿ ಮುಖ್ಯಸ್ಥನಾಗಿದ್ದು, ಮುಂಬೈ ದಾಳಿಯಲ್ಲಿ ಈತ ಪ್ರಮುಖ ಪಾತ್ರ ನಿರ್ವಹಿಸಿದ್ದ. ಅಲ್ಲದೇ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿ ವೇಳೆಯೂ ಈತನೇ ಐಎಸ್‌ಐ ಮುಖ್ಯಸ್ಥನಾಗಿದ್ದ.

ಇಂತಹ ಮಹಾನ್(?) ವ್ಯಕ್ತಿಯ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಹಾಜರಿದ್ದ ಈ ಮಹನೀಯರು(?) ದೇಶಕ್ಕೆ ಉತ್ತರ ಕೊಡಬೇಕಲ್ಲವೇ?. ಕೇಂದ್ರ ಸರ್ಕಾರ ಅಸದ್ ದುರಾನಿ ಭಾರತಕ್ಕೆ ಬರುವುದಕ್ಕೆ ನಿಷೇಧ ಹೇರಿದ್ದು, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆತನೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಾಗಿದೆ.

ಅಸದ್ ಅನ್ಸಾರಿ ಪುಸ್ತಕವನ್ನು ಕಳೆದ ಮೇ.24ರಂದೇ ಬಿಡುಗಡೆ ಮಾಡಲಾಗಿದ್ದು, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

Follow Us:
Download App:
  • android
  • ios