ಕಾಂಗ್ರೆಸ್ ಅತೃಪ್ತ ಬಣದಿಂದ ಇಂದು ಮಹತ್ವದ ಸಭೆ

Congress Leaders meeting today
Highlights

ಕಾಂಗ್ರೆಸ್ ನಲ್ಲಿ ಅತೃಪ್ತರ ಬಂಡಾಯ ತಣ್ಣಗಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ.   ಇಂದು ಕಾಂಗ್ರೆಸ್’ನ ಎರಡನೇ ಅತೃಪ್ತ ಬಣದಿಂದ ಮಹತ್ವದ ಸಭೆ ನಡೆಯಲಿದೆ. ಮಾಜಿ ಸಚಿವ, ಹಿರಿಯ ಶಾಸಕ ಹೆಚ್ ಕೆ ಪಾಟೀಲ್ ನೇತೃತ್ವದಲ್ಲಿ‌ ಸಭೆ ನಡೆಯಲಿದೆ. 

ಬೆಂಗಳೂರು (ಜೂ. 12): ಕಾಂಗ್ರೆಸ್ ನಲ್ಲಿ ಅತೃಪ್ತರ ಬಂಡಾಯ ತಣ್ಣಗಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ.   ಇಂದು ಕಾಂಗ್ರೆಸ್’ನ ಎರಡನೇ ಅತೃಪ್ತ ಬಣದಿಂದ ಮಹತ್ವದ ಸಭೆ ನಡೆಯಲಿದೆ.  ಮಾಜಿ ಸಚಿವ, ಹಿರಿಯ ಶಾಸಕ ಹೆಚ್ ಕೆ ಪಾಟೀಲ್ ನೇತೃತ್ವದಲ್ಲಿ‌ ಸಭೆ ನಡೆಯಲಿದೆ. 

ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕರು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ.  ಈ ಹಿನ್ನೆಲೆಯಲ್ಲಿ  ರಾಜ್ಯ ಕಾಂಗ್ರೆಸ್ ವರಿಷ್ಠರಿಗೆ ಹಾಗೂ ಹೈ ಕಮಾಂಡ್ ನಾಯಕರಿಗೆ ಸ್ಪಷ್ಟ ಸಂದೇಶ ಕೊಡುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತದೆ. 

ಬಾಕಿ ಉಳಿದ ಆರು ಸ್ಥಾನಗಳಲ್ಲಿ ಅವಕಾಶ ಪಡೆಯುವುದು, ತಮ್ಮನ್ನು ಕಡೆಗಣಿಸಿದ ಹೈ ಕಮಾಂಡ್ ನಾಯಕರಿಗೆ ಸ್ಪಷ್ಟ ಸಂದೇಶ ಕೊಡುವುದರ ಬಗ್ಗೆ ‌ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ. ಎರಡನೇ ಅತೃಪ್ತ ಬಣದ ಕಾಂಗ್ರೆಸ್ ಶಾಸಕರ ಈ ‌ನಡೆ ಕುತೂಹಲ ಮೂಡಿಸಿದೆ. 
 

loader