ಬೆಂಗಳೂರು [ಜು.14] : ಕರ್ನಾಟಕ ರಾಜಕೀಯದಲ್ಲಿ ಪ್ರಹಸನ ಮುಂದುವರಿದಿದೆ.  ಅತೃಪ್ತರಾಗಿ ರಾಜೀನಾಮೆ ನೀಡಿದ ರಾಮಲಿಂಗಾ ರೆಡ್ಡಿ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಶತ ಪ್ರಯತ್ನ ನಡೆಸುತ್ತಿದ್ದಾರೆ. 

ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ, ಎಚ್.ಕೆ. ಪಾಟೀಲ್ ರಾಮಲಿಂಗಾ ರೆಡ್ಡಿ ಮನೆಗೆ ಆಗಮಿಸಿ ಮನವೊಲಿಕೆ ಯತ್ನ ನಡೆಸಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿರಿಯ ಕಾಂಗ್ರೆಸಿಗರಾದ ರಾಮಲಿಂಗಾ ರೆಡ್ಡಿ  ಅವರನ್ನು ಮನವೊಲಿಸುವಂತೆ ಇಬ್ಬರು ನಾಯಕರನ್ನು ಕಳಿಸಲಾಗಿದೆ. ಇಬ್ಬರೂ ಕೂಡ ರಾಮಲಿಂಗಾ ರೆಡ್ಡಿಗೆ ಆಪ್ತರಾಗಿರುವ ಹಿನ್ನೆಲೆಯಲ್ಲಿ ಕಳಿಸಲಾಗಿದ್ದು, ಮನವೊಲಿಕೆ ಕಸರತ್ತು ಮುಂದುವರಿದಿದೆ.  

ಈಗಾಗಲೇ ಕರ್ನಾಟಕ ಕಾಂಗ್ರೆಸ್ ನಲ್ಲಿ ಹಲವು ಅತೃಪ್ತರಿದ್ದು, ರಾಜೀನಾಮೆ ನೀಡಿ ಮುಂಬೈ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಸಾಲಿಗೆ ದಿನದಿಂದ ದಿನಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.