ಬೆಳಗಾವಿ ಜಿಲ್ಲೆಯವರೇ ಆದ ಹಿರಿಯ ಕಾಂಗ್ರೆಸ್​ ನಾಯಕರೇ ಈ ದಾಳಿ ಹಿಂದೆ ಇದ್ದಾರೆ. ಇದರಿಂದಾಗಿಯೇ ಸಣ್ಣ ಕೈಗಾರಿಕಾ ಸಚಿವರ ನಿವಾಸಗಳ ಮೇಲೆ ದಾಳಿ ನಡೆದಿದೆ ಎಂದು ಕುಮಾರಸ್ವಾಮಿ ಬಾಂಬ್ ಹಾಕಿದ್ದಾರೆ. 

ಬೆಳಗಾವಿ (ಜ.25): ರಮೇಶ್ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯವರೇ ಆದ ಹಿರಿಯ ಕಾಂಗ್ರೆಸ್​ ನಾಯಕರೇ ಈ ದಾಳಿ ಹಿಂದೆ ಇದ್ದಾರೆ. ಇದರಿಂದಾಗಿಯೇ ಸಣ್ಣ ಕೈಗಾರಿಕಾ ಸಚಿವರ ನಿವಾಸಗಳ ಮೇಲೆ ದಾಳಿ ನಡೆದಿದೆ ಎಂದು ಕುಮಾರಸ್ವಾಮಿ ಬಾಂಬ್ ಹಾಕಿದ್ದಾರೆ. 

ಬೈಲಹೊಂಗಲದಲ್ಲಿ ಧರ್ಮಸ್ಥಳ ಸಂಸ್ಥೆಯವರು ಆಯೋಜಿಸಿದ್ದ ಕೃಷಿ ಮೇಳಕ್ಕೆ ಹೋಗುವ ಮುನ್ನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಕುಮಾರಸ್ವಾಮಿ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್’ನವರೇ ಮಂತ್ರಿ ಆಗಲು ರಮೇಶ ಜಾರಕಿಹೊಳಿ ವಿರುದ್ಧ ಐಟಿಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.