ಗವರ್ನರ್ ಡೆಡ್ ಲೈನ್ ಮೇಲೆ ಡೆಡ್ ಲೈನ್ ನೀಡುತ್ತಿದ್ದಾರೆ. ರಾಜ್ಯ ರಾಜಕೀಯ ಹೈ ಡ್ರಾಮಾ ಮುಂದುವರಿಯುತ್ತಲೇ ಇದೆ. ನಾಯಕರು ತಮ್ಮ ತಮ್ಮ ಯತ್ನದಲ್ಲಿ ಮುಂದುವರಿದಿದ್ದಾರೆ.

ಬೆಂಗಳೂರು [ಜು.19] : ರಾಜ್ಯ ಸರ್ಕಾರದ ಹೈ ಡ್ರಾಮಾ ಮುಂದುವರಿದಿದೆ. ಇತ್ತ ವಿಶ್ವಾಸಮತ ಯಾಚನೆಗೆ ಗವರ್ನರ್ ವಜುಭಾಯ್ ವಾಲಾ ಡೆಡ್ ಲೈನ್ ಮೇಲೆ ಡೆಡ್ ಲೈನ್ ನೀಡುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತ ಬಿಜೆಪಿ ನಾಯಕರು ಮೈತ್ರಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವ್ಯರ್ಥ ಚರ್ಚೆಯ ಮೂಲಕ ಸಮಯ ಮುಂದೂಡಲಾಗುತ್ತಿದೆ ಎಂದು ಪದ್ಮನಾಭನಗರ ಶಾಸಕ, ಬಿಜೆಪಿ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

ಸರ್ಕಾರ ಇದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದು, ಈ ವೇಳೆ ಜಮೀರ್ ಅಹಮದ್ ಮಧ್ಯ ಪ್ರವೇಶಿಸಿ ಮರು ಪ್ರತಿಕ್ರಿಯೆ ನೀಡಿದರು. 

ರಾಜ್ಯ ರಾಜಕೀಯದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮೀರ್ ಸರ್ಕಾರ ಇದೆ ಅಣ್ಣಾ.. ಸರ್ಕಾರ ಇದೆ ಎಂದು ನಗುತ್ತಾ ಹೇಳಿ ತೆರಳಿದರು.