ಮಂಗಳೂರು (ಮಾ. 02): ಸರ್ಜಿಕಲ್ ಸ್ಟ್ರೈಕ್ ವಿಚಾರವಾಗಿ ಮಾತನಾಡುವ ವೇಳೆ ಯಡಿಯೂರಪ್ಪ 22 ಸೀಟು ಗೆಲ್ಲುತ್ತೇವೆ ಎಂದು ಹೇಳಿರುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 

44ಯೋಧರನ್ನ ಬಲಿಕೊಟ್ಟು, 22 ಸ್ಥಾನ ಗೆಲ್ಲುವುದು ಬಿಜೆಪಿಯ ಸ್ಟ್ರಾಟರ್ಜಿ'

ಸಚಿವ ಯುಟಿ ಖಾದರ್ ಬಿಎಸ್ ವೈ ಹೇಳಿಕೆಯನ್ನು ಖಂಡಿಸುತ್ತಾ, ಬಿಜೆಪಿಯವರು ಅಧಿಕಾರಕ್ಕಾಗಿ ಯಾವ ಹಂತಕ್ಕೂ ಹೋಗಲು ಸಿದ್ಧರಿದ್ದಾರೆ.  ಎಂಎಲ್ ಎ ಚುನಾವಣೆ ಮೊದಲು ಕೊಲೆಯಲ್ಲಿ ರಾಜಕೀಯ ಮಾಡಿದರು. ಈಗ ಸರ್ಜಿಕಲ್ ಸ್ಟ್ರೈಕ್ ನಲ್ಲೂ ಮಾಡಿದರು ಎಂದು ಟೀಕಿಸಿದ್ದಾರೆ. 

ಕಾಂಗ್ರೆಸ್ ನವರಿಗೆ ದೇಶ ಮತ್ತು ಸೈನಿಕರ ಚಿಂತೆ. ಆದರೆ ಬಿಜೆಪಿಯವರಿಗೆ ರಾಜಕೀಯ ಮತ್ತು ಸೀಟಿನ ಚಿಂತೆ.  ಯಡಿಯೂರಪ್ಪ ಹೇಳಿಕೆ ಇದೊಂದು ದೇಶಕ್ಕೆ ಕಪ್ಪು ಚುಕ್ಕೆ. ಸೈನಿಕರ ದಾಳಿಯನ್ನು ದುರುಪಯೋಗ ಪಡಿಸಬಾರದು ಎಂದಿದ್ದಾರೆ. 

ಪಾಕಿಸ್ತಾನ ಜಿಂದಾಬಾದ್ ಎಂದ ಕೈ ಮಾಜಿ ಶಾಸಕನ ಆಪ್ತ: ರಾಮದುರ್ಗ ಉದ್ವಿಗ್ನ!

ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡುತ್ತಾ,  ಬಿಜೆಪಿಯವರು ಎಲ್ಲರಿಗೂ ಆಫರ್ ಕೊಡುತ್ತಾರೆ.  ಆದರೆ ಸುಮಲತಾ ಅವರು ಒಪ್ಪುವುದಿಲ್ಲ ಎಂದು ಭಾವಿಸುತ್ತೇವೆ.  ಅಂಬರೀಷ್ ಅವರು ಜಾತ್ಯಾತೀತ ತತ್ವದಲ್ಲಿದ್ದವರು.  ಅವರು ಎಲ್ಲಾ ವರ್ಗದ ಜನರಿಗೆ ಬೇಕಾಗಿದ್ದವರು. ಆದ್ದರಿಂದ ಸುಮಲತಾ ಅಂಬರೀಷ್ ಬಿಜೆಪಿ ಆಫರ್ ಒಪ್ಪಲಾರರು ಎಂದು ಖಾದರ್ ಹೇಳಿದ್ದಾರೆ.