ಚಾಮರಾಜನಗರ, (ಮಾ.02): 44ಯೋಧರನ್ನ ಬಲಿಕೊಟ್ಟು, 22 ಸ್ಥಾನ ಗೆಲ್ಲುವುದು  ಬಿಜೆಪಿಯವರ  ಮನಸ್ಸಿನಲ್ಲಿತ್ತು. ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ  ಮೂಲಕ ಅದು ಬೆಳಕಿಗೆ ಬಂದಿದೆ ಎಂದು ಸಮಾಜ ಕಲ್ಯಾಣ ಸಚಿವ  ಪ್ರಿಯಾಂಕ ಖರ್ಗೆ ಲೇವಡಿ ಮಾಡಿದ್ದಾರೆ.

"

#AirStrike ನಿಂದ ಬಿಜೆಪಿಗೆ 22 ಸೀಟು ಖಚಿತ: ಯಡಿಯೂರಪ್ಪಗೆ ಛೀಮಾರಿ

(ಇಂದು) ಶನಿವಾರ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ  ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಭಾಗವಹಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಪರೇಷನ್ ಕಮಲ ಮಾಡಿದ್ದು ಬಹಿರಂಗವಾಗಿದೆ.

 ಬಿ.ಎಸ್. ಯಡಿಯೂರಪ್ಪ ರವರು ಸ್ಪೀಕರ್, ಜಡ್ಜಗಳನ್ನ ಬುಕ್ ಮಾಡಿದ್ದೇವೆ  ಎಂಬ ಆಡಿಯೋದಲ್ಲಿದ್ದ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಈ ಎಲ್ಲಾ ಷಡ್ಯಂತ್ರಗಳನ್ನ ಚುನಾವಣೆ ಸಮೀಪದಲ್ಲಿ  ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.