ಬೆಂಗಳೂರು :  ಖಾತೆ - ಕ್ಯಾತೆಗೆ ಪ್ರಮುಖ ಕಾರಣ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಹಾಗೂ ಗೃಹ ಖಾತೆ​ ಮತ್ತು ಯುವಜನ ಮತ್ತು ಕ್ರೀಡಾ ಖಾತೆ​ಯನ್ನು ಹೊಂದಿ​ರುವ ಜಿ.ಪರ​ಮೇ​ಶ್ವರ್‌ ಅವ​ರಿಂದ ಪ್ರಮುಖ ಖಾತೆ​ಗ​ಳಾದ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಅಥವಾ ಗೃಹ ಖಾತೆ​ಯನ್ನು ಹಿಂಪ​ಡೆ​ಯ​ಬೇಕು ಎಂದು ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಬಣವೂ ಒತ್ತಾಯ ನಡೆಸುತ್ತಿದೆ.

ಪರ​ಮೇ​ಶ್ವರ್‌ ಅವರು ತಮ್ಮ ಬಳಿ ಇರುವ ಹೆಚ್ಚು​ವರಿ ಖಾತೆ​ಗಳ ಪೈಕಿ ಯುವಜನ ಹಾಗೂ ಕ್ರೀಡಾ ಖಾತೆ​ಯನ್ನು ಬಿಟ್ಟು​ಕೊ​ಡಲು ಒಪ್ಪಿ​ದ್ದಾರೆ ಎನ್ನ​ಲಾ​ಗಿದೆ. ಆದರೆ, ತಾವು ಉಪ ಮುಖ್ಯ​ಮಂತ್ರಿ​ಯಾ​ಗಿ​ರು​ವು​ದ​ರಿಂದ ಗೃಹ ಹಾಗೂ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಎರಡು ಖಾತೆ​ಗಳು ತಮಗೆ ಉಳಿ​ಯ​ಬೇಕು. ಇಲ್ಲ​ದಿ​ದ್ದರೆ, ತಮಗೆ ನೀಡಿ​ರುವ ಉಪ ಮುಖ್ಯ​ಮಂತ್ರಿ ಹುದ್ದೆಗೆ ಯಾವುದೇ ಗೌರವ ಬರು​ವು​ದಿಲ್ಲ ಎಂಬ ವಾದ​ ಮಂದಿ​ಟ್ಟಿ​ದ್ದಾರೆ ಎನ್ನ​ಲಾ​ಗಿ​ದೆ.

ಆದರೆ, ಇದನ್ನು ಸಿದ್ದ​ರಾ​ಮಯ್ಯ ಬಣ ಒಪ್ಪು​ತ್ತಿಲ್ಲ. ಸಂಪು​ಟಕ್ಕೆ ನೂತ​ನ​ವಾಗಿ ಸೇರ್ಪ​ಡೆ​ಯಾ​ದ​ವ​ರಲ್ಲೂ ಹಿರಿಯ ಸಚಿ​ವ​ರಿ​ದ್ದಾರೆ. ಅವ​ರಿಗೆ ಪ್ರಮುಖ ಖಾತೆ​ಯನ್ನು ನೀಡ​ಬೇ​ಕಾದ ಅಗ​ತ್ಯ​ವಿದೆ. ಹೀಗಾಗಿ ಪರ​ಮೇ​ಶ್ವರ್‌ ತಮ್ಮ ಬಳಿ ಇರುವ ಎರಡು ಪ್ರಮುಖ ಖಾತೆ​ಗಳ ಪೈಕಿ ಒಂದನ್ನು ಬಿಟ್ಟು​ಕೊ​ಡ​ಬೇಕು ಎಂದು ವಾದಿ​ಸು​ತ್ತಿ​ದ್ದಾರೆ ಎನ್ನ​ಲಾ​ಗಿದೆ.

ಅದೇ ರೀತಿ ಡಿ.ಕೆ. ಶಿವ​ಕು​ಮಾರ್‌ ಬಳಿ ಇರುವ ಜಲ​ಸಂಪ​ನ್ಮೂಲ ಖಾತೆ ಹಾಗೂ ವೈದ್ಯ​ಕೀಯ ಶಿಕ್ಷಣ ಖಾತೆ​ಗಳ ಪೈಕಿ ಒಂದನ್ನು, ದೇಶ​ಪಾಂಡೆ ಬಳಿ ಇರುವ ಕಂದಾಯ ಹಾಗೂ ಕೌಶ​ಲ್ಯಾ​ಭಿ​ವೃದ್ಧಿ, ಕೆ.ಜೆ. ಜಾಜ್‌ರ್‍ ಬಳಿ ಇರುವ ಕೈಗಾ​ರಿಕೆ ಹಾಗೂ ಐಟಿ-ಬಿಟಿ, ಯು.ಟಿ. ಖಾದರ್‌ ಬಳಿ ಇರುವ ನಗ​ರಾ​ಭಿ​ವೃದ್ಧಿ ಹಾಗೂ ವಸತಿ, ಜಮೀರ್‌ ಅಹ್ಮದ್‌ ಬಳಿ ಇರುವ ಆಹಾರ ಮತ್ತು ನಾಗ​ರಿಕ ಪೂರೈಕೆ ಹಾಗೂ ಅಲ್ಪ​ಸಂಖ್ಯಾತ ಅಭಿ​ವೃದ್ಧಿ ಖಾತೆ​ಗಳ ಪೈಕಿ ತಲಾ ಒಂದೊಂದು ಖಾತೆ​ಗ​ಳನ್ನು ಬಿಡ​ಬೇಕು ಎಂದು ಸೂಚಿ​ಸ​ಲಾ​ಗಿದೆ.

ಆದರೆ, ಈ ಸಚಿ​ವರು ಪ್ರಮುಖ ಖಾತೆ​ಗ​ಳನ್ನು ಉಳಿ​ಸಿ​ಕೊ​ಳ್ಳಲು ಪ್ರಯತ್ನ ನಡೆ​ಸು​ತ್ತಿ​ರು​ವುದು ಸಮ​ಸ್ಯೆ​ಯಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ವೇಣು​ಗೋ​ಪಾಲ್‌ ಮಧ್ಯ​ಸ್ಥಿಕೆ ಅನಿ​ವಾ​ರ್ಯ​ವಾ​ಗಿ​ ಪರಿಣಮಿಸಿದೆ.