ಬೆಂಗಳೂರು[ಜು. 14] ರಾಮಲಿಂಗಾ ರೆಡ್ಡಿ ಅವರನ್ನು ಮನವೊಲಿಸಿ ರಾಜೀನಾಮೆ ವಾಪಸ್ ಪಡೆಯಿರಿ ಎಂದು ಕೇಳಲು ಹೋಗಿದ್ದ ಕಾಂಗ್ರೆಸ್ ನಾಯಕರ ಮಾತಿಗೆ ರೆಡ್ಡಿ ಮಣಿದಿಲ್ಲ.

ಡಿಸಿಎಂ ಅಲ್ಲ ಸಿಎಂ ಹುದ್ದೆ ಕೊಟ್ಟರೂ ನಾನು ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಹೇಳಿ ಕಳಿಸಿದ್ದಾರೆ. ಸಿದ್ದರಾಮಯ್ಯ ಆದಿಯಾಗಿ ಅಗ್ರ ನಾಯಕರು ಒಂದು ಗಂಟೆ ಕಾಲ ಸಂಧಾನ ನಡೆಸುವ ಪ್ರಯತ್ನ ಮಾಡಿದರು.

ಬಿಜೆಪಿಯಲ್ಲಿ ಮಹತ್ವದ ಬದಲಾವಣೆ, ಬಿಎಲ್ ಸಂತೋಷ್‌ಗೆ ಹೊಸ ಹುದ್ದೆ ನೀಡಿದ ಶಾ

ಸಮ್ಮಿಶ್ರ ಸರ್ಕಾರ ನಡೆಸಿಕೊಂಡ ರೀತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ ಬಳಿ ತೆರಳಿದ್ದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸಹ ನಿರಾಸೆಯಿಂದ ಹಿಂದಕ್ಕೆ ಬರುವಂತಾಯಿತು.