ಬೆಂಗಳೂರು[ಜು. 14] ಬಿಜೆಪಿಯಲ್ಲೊಂದು ಮಹತ್ವದ ಬದಲಾವಣೆಯಾಗಿದೆ.  ಬಿ.ಎಲ್. ಸಂತೋಷ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ದಕ್ಷಿಣ ಭಾರತದ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಲ್. ಸಂತೋಷ್ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಕ ಮಾಡಿದ್ದಾರೆ.

ಮುಂಬೈಗೆ ತೆರಳಿ ಬಾಂಬ್ ಸಿಡಿಸಿದ ಎಂಟಿಬಿ, ದೋಸ್ತಿಗೆ ಅತಿದೊಡ್ಡ ಶಾಕ್

ದಕ್ಷಿಣ ಭಾರತದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಇನ್ನು ಮುಂದೆ ಇಡೀ ದೇಶದ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದಾರೆ. ಬಿ ಎಲ್ ಸಂತೋಷ್ ಅವರನ್ನು ಸಂಪೂರ್ಣವಾಗಿ ಕರ್ನಾಟಕ ರಾಜಕಾರಣಕ್ಕೆ ಕರೆದುಕೊಂಡು ಬರಲಾಗುತ್ತದೆ ಎಂಬ ಮಾತುಗಳು  ಕೇಳಿಬಂದಿದ್ದವು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಂತೋಷ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.