ಬೆಂಗಳೂರು [ಜು.24] : ವಿಶ್ವಾಸಮತ ಯಾಚನೆ ಬಳಿಕ ಇತ್ತ ಬಿಜೆಪಿ ಅಧಿಕಾರಕ್ಕೇರಲು ಸಿದ್ಧವಾಗುತ್ತಿದ್ದರೆ ಎತ್ತ ವಿಪಕ್ಷ ಪಡೆಯಲ್ಲಿ ಹೊಸ ಪೈಪೋಟಿ ಆರಂಭವಾಗಿದೆ. 

ವಿಪಕ್ಷ ನಾಯಕರ ಸ್ಥಾನ ಪಡೆಯಲು ಕಾಂಗ್ರೆಸ್ ನಾಯಕರಲ್ಲೇ ಪೈಪೋಟಿ ನಡೆಯುತ್ತಿದ್ದರೆ ಅತ್ತ ಎಚ್ಚೆತ್ತ ಸಿದ್ಧರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. 

 ಎಚ್ಚೆತ್ತ ಸಿದ್ಧರಾಮಯ್ಯ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನದ ಜೊತೆಗೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 

ಆದರೆ ಎರಡು ಹುದ್ದೆಗಳನ್ನು ಇಬ್ಬರಿಗೆ ಹಂಚಿಕೆ ಮಾಡಲು ಕಾಂಗ್ರೆಸ್ ಹೈ ಕಮಾಂಡ್ ಚಿಂತನೆ ನಡೆಸಿದೆ, ಸಿದ್ಧರಾಮಯ್ಯರಿಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಮಾತ್ರವೇ ಕೊಡುವ ಸಾಧ್ಯತೆ ಇದೆ. ಇದೀಗ ಹುದ್ದೆ ಹಂಚಿಕೆಯ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಮುಂದಿನ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.