ಬೆಂಗಳೂರು[ಜು. 25] ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಮಾನವನ್ನು ಮಾಜಿ ಸಿಎಂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಸಿದ್ದರಾಮಯ್ಯ ಸ್ವಾಗತ ಮಾಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ನಮ್ಮ‌ ಪಕ್ಷದ ಮೂವರು ಶಾಸಕರನ್ನು ಅನರ್ಹಗೊಳಿಸಿದ ಮಾನ್ಯ ಸಭಾಧ್ಯಕ್ಷರ ನಿರ್ಣಯವನ್ನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಇಂಥ ಕಠಿಣ ನಿರ್ಣಯಗಳು ಅತ್ಯಗತ್ಯ. ಸ್ವಾರ್ಥ ಸಾಧನೆಗಾಗಿ ಜನಾದೇಶವನ್ನು ಉಲ್ಲಂಘಿಸುವವರಿಗೆ ಈ ಐತಿಹಾಸಿಕ ನಿರ್ಣಯ ಎಚ್ಚರಿಕೆಯ ಘಂಟೆಯಾಗಲಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಅನರ್ಹರ ಮುಂದಿನ ಹೆಜ್ಜೆ ಏನು? ಮತ್ತೆ ಚುನಾವಣೆಗೆ ನಿಲ್ಲಲು ಸಾಧ್ಯವೆ?

ಅಧಿಕಾರದಾಸೆಗೆ ಪಕ್ಷ ತೊರೆದು ಹೋಗಿ ತಮ್ಮನ್ನಾರಿಸಿದ ಜನರನ್ನು ಇಡೀ ದೇಶದ ಜನರ ಎದುರಿಗೆ ನಗೆಪಾಟಲಿಗೀಡಾಗುವಂತೆ ಮಾಡಿದ ರಮೇಶ್ ಜಾರಕಿಹೊಳಿ,‌ ಶಂಕರ್ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ಅಮಾನತು ಮಾಡಿರುವ ಸಭಾಧ್ಯಕ್ಷರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಬಂಡಾಯ ಶಾಸಕರ ನಡವಳಿಕೆಯಿಂದಾಗಿ ರಾಜಕಾರಣದ ಬಗ್ಗೆ ಜನರಲ್ಲಿ ಹೇಸಿಗೆ ಹುಟ್ಟಿದೆ ಎಂದು ಡಾ. ಜಿ.ಪರಮೇಶ್ವರ ಹೇಳಿದ್ದಾರೆ.