Asianet Suvarna News Asianet Suvarna News

ಎಂ.ಬಿ ಪಾಟೀಲ್‌ಗೆ ಮುಖಭಂಗ-ಶಿವಾನಂದ್ ಪಾಟೀಲ್‌ಗೆ ಸಚಿವ ಭಾಗ್ಯ

4 ಬಾರಿ ಸಚಿವರಾಗಿ ಆಯ್ಕೆಯಾಗಿದ್ದರೂ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ್ ಪಾಟೀಲ್‌ಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಇದೀಗ 5ನೇ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಶಿವಾನಂದ್ ಪಾಟೀಲ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Congress leader Shivanand Patil took oath as a ministers in the Cabinet

ಬೆಂಗಳೂರು(ಜೂನ್.6): ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿದ್ದ ಮಾಜಿ ಸಚಿವ ಎಂ ಬಿ ಪಾಟೀಲ್ ಗೆ ಸ್ವಪಕ್ಷದಿಂದಲೇ ಭಾರಿ ಮುಖಭಂಗವಾಗಿದೆ. ಸಚಿವ ಸ್ಥಾನ ನೀಡದೇ ಎಂ ಬಿ ಪಾಟೀಲ್ ಗೆ ಹೈಕಮಾಂಡ್ ಜಾಣ್ಮೆಯ ನಡೆ ತೊರಿದೆ.‌ ಏತನ್ಮಧ್ಯೆ ಎಂ ಬಿ ಪಾಟೀಲ್ ರ ಬದ್ಧ ವೈರಿಯಾಗಿದ್ದ ಕಾಂಗ್ರೆಸ್ ಪಕ್ಷದ ಶಿವಾನಂದ ಪಾಟೀಲ್ ಗೆ ಸಚಿವ ಸ್ಥಾನ ನೀಡಿದ್ದು, ಎಂ ಬಿ ಪಾಟೀಲ್ ಪಾಳೆಯದ ನಾಯಕ್ರಿಗೆ ತಲೆತಗ್ಗಿಸುವಂತೆ ಮಾಡಿದೆ. 

ಬಸವನಬಾಗೇವಾಡಿ ಕ್ಷೇತ್ರದ ಶಿವಾನಂದ ಪಾಟೀಲ್ ಸತತ 5 ಬಾರಿ ಶಾಸಕರಾಗಿದ್ದವರು. ಶಿವಾನಂದ ಪಾಟೀಲ್‌ ಅವ್ರು ಮೊದಲ ಬಾರಿಗೆ ಸಚಿವ್ರಾಗಿದ್ದಾರೆ. ಜನತಾ ದಳದಿಂದ ರಾಜಕೀಯ ಆರಂಭಿಸಿದ್ದ ಶಿವಾನಂದ,‌ 4 ಬಾರಿ ಶಾಸಕ್ರಾಗಿದ್ದರೂ ಸಚಿವರಾಗುವ ಯೋಗ ಕೂಡಿ ಬಂದಿರಲಿಲ್ಲ. ಈಗ 5 ನೇ ಬಾರಿಗೆ ಶಾಸಕರಾಗಿದ್ದೇ ತಡ,‌ ಸಚಿವ್ರಾಗುವ ಶುಭ ಗಳಿಗೆ‌ ಕೂಡಿ ಬಂದಿದೆ.‌   

ವಿಜಯಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಗಿರುವ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ವಿಜಯಪುರ ಜಿಲ್ಲೆಯ ಚತುರ ರಾಜಕಾರಣಿ ಎಂದೇ ಹೆಸರಾಗಿದ್ದಾರೆ.  ಪಕ್ಷಕ್ಕಿಂತಲೂ ವೈಯಕ್ತಿಕ ವರ್ಚಸ್ಸನಿಂದಲೇ ರಾಜಕೀಯದಲ್ಲಿ ಸಾಕಷ್ಟು ಹೆಸರು‌ಮಾಡಿದ್ದಾರೆ.  

ಬಸವಣ್ಣನ ತವರು ಬಸವನಬಾಗೇವಾಡಿಯಿಂದ‌ ಮೂರನೇ ಬಾರಿ ಶಾಸಕರಾಗಿರುವ ಶಿವಾನಂದ‌ ಎಸ್ ಪಾಟೀಲ್. ಇದೀಗ ಹೆಚ್‌‌ ಡಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವ್ರಾಗಿದ್ದಾರೆ. ಕಳರದ ಬಾರಿಯೇ ಶಿವಾನಂದ ಪಾಟೀಲ್ ಸಚಿವರಾಗಬೇಕಿತ್ತು. ಆದ್ರೆ ಲಿಂಗಾಯತ ಮತ್ತು ಪಂಚಮಸಾಲಿ ಕೋಡಾದಡಿ ಧಾರವಾಡ ವಿಜಯ ಕುಲ್ಕರ್ಣಿ ಅವ್ರಿಗೆ ಸಚಿವ ಸ್ಥಾನ ಸಿಕ್ಕಿಂದ್ದರಿಂದ ಶಿವಾನಂದ ಅವ್ರಿಗೆ ಸಚಿವ ಸ್ಥಾನ ಕೈತಪ್ಪಿತ್ತು.  ಈ ಬಾರಿ ಶಿವಾನಂದ ಪಾಟೀಲ್ ಅವ್ರಿಗೆ ಸಚಿವರಾಗೋ ಯೋಗ ಕೊನೆಗೂ ಕೂಡಿ ಬಂದಿದೆ.

 1992 ರಲ್ಲಿ ವಿಜಯಪುರ ನಗರಸಭೆ ಅಧ್ಯಕ್ಷರಾಗಿದ್ದ ಶಿವಾನಂದ, ನಂತರ 1993 ರಲ್ಲಿ ನಡೆದ ತಿಕೋಟಾ ವಿಧಾನಸಭೆ ಉಪ ಚುನಾವಣೆಯಲ್ಲಿ‌ ಮೊದಲ ಬಾರಿಗೆ ಜನತಾ ದಳದಿಂದ ಎಂ ಬಿ‌ ಪಾಟೀಲ್ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. 1994 ರಲ್ಲಿ ನಡೆದ ಚುನಾವಣೆಯಲ್ಲಿ ತಿಕೋಟಾದಿಂದ‌ ಜಯಭೇರಿ ಬಾರಿಸಿದ್ರು. ನಂತರ 1999 ರಲ್ಲಿ ತಿಕೋಟಾದಿಂದ‌ ಪಕ್ಷ ಬದಲಿಸಿ ಬಿಜೆಪಿಯಿಂದ ಶಾಸಕ್ರಾಗಿ ಆಯ್ಕೆಯಾಗಿದದ್ದರು.  

2004 ರ‌ ಚುನಾವಣೆ ಯಲ್ಲಿ ಬಿಜೆಪಿ ತೊರೆದಿದ್ದಲ್ಲದೇ ಕ್ಷೇತ್ತವನ್ನು ಬದಲಿಸಿ ಬಸವನಬಾಗೇವಾಡಿ ಕಾಂಗ್ರೆಸ್ ನಿಂದ‌ ಗೆದ್ದು ಬಂದ್ರು. ಆದ್ರೆ 2009 ರಲ್ಲಿ ಬಸವನಬಾಗೇವಾಡಿಯಿಂದ ಕಾಂಗ್ರೆಸ್ ನಿಂದ‌ಪುನರಾಯ್ಕೆ ಬಯಸಿ ಸ್ಪರ್ಧಿಸಿ ಬಿಜೆಪಿ ವಿರುದ್ಧ ಸೋಲುಂಡರು. ಆದ್ರೆ 2013 ರಲ್ಲಿ ಬಸವನಬಾಗೇವಾಡಿಯಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ ಶಿವಾನಂದ, 2018 ರ ಚುನಾವಣೆಯಲ್ಲೂ ಗೆದ್ದು ಇದೀಗ ಸಚಿವರಾಗಿದ್ದಾರೆ. ಇದೀಗ ಅವರ ಬೆಂಬಲಿಗರಲ್ಲಿ ಸಂತಸ ಮನೆಮಾಡಿದೆ.
 

Follow Us:
Download App:
  • android
  • ios