ಧಾರವಾಡ[ಜ.14]  ಗೃಹ ಸಚಿವ ಎಂಬಿ ಪಾಟೀಲ್ ಅವರನ್ನು ‘ಮಂಗ’ ಎಂದು ಕರೆದಿದ್ದ ಶಾಮನೂರು ಮತ್ತೆ  ತಮ್ಮ ವಾಗ್ಬಾಣಗಳನ್ನು ಮುಂದುವರಿಸಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಶಂಕರಪ್ಪ ‘ಆತನಿಗೆ ವಿಚಾರಗಳು ಗೊತ್ತಿಲ್ಲ, ಅದಕ್ಕೆ ಹೀಗೆಲ್ಲ ಮಾತನಾಡುತ್ತಾ ಇದ್ದಾನೆ.  ಆತನನ್ನು ನಿರ್ಲಕ್ಷ್ಯ ಮಾಡಿ ಬಿಡಬೇಕು ಅಂತಾ ನಾವೆಲ್ಲ ನಿರ್ಧರಿಸಿದ್ದೇವೆ’ ಎಂದು ಏಕವಚನದಲ್ಲಿಯೇ ದಾಳಿ ಮಾಡಿದರು.

ನಾನು ಹಿರಿಯನಾಗಿ ಮಾತನಾಡಿ ಹೇಳಿದಾಗ ಸುಧಾರಿಸಿಕೊಳ್ಳಬೇಕಿತ್ತು.  ಪ್ರಭಾಕರ ಕೋರೆ ಮತ್ತು ನಾನು ಎಂಬಿಗೆ ತುಂಬಾ ಸಹಾಯ ಮಾಡಿದ್ದೇವೆ. ಅದನ್ನೆಲ್ಲ ಆತ ಮರೆತು ಬಿಟ್ಟಿದ್ದಾನೆ. ನಾನು ಆ ಬಗ್ಗೆ ಮಾತನಾಡಬಾರು ಅಂತಾ ವಿಷಯ ಕ್ಲೋಸ್ ಮಾಡಿದ್ದೇವೆ ಎಂದರು.

ನನಗೆ ಸಚಿವ ಸ್ಥಾನ ಏನೂ ಬೇಕಾಗಿಲ್ಲ.  ಬಿಜೆಪಿಯವರಿಂದ ಏನೂ ಆಗುವುದಿಲ್ಲ. ಸುಮ್ಮನೇ ಅವರು ಹೇಳ್ತಾ ಇರತಾರಷ್ಟೇ. ನಮ್ಮ‌ ಪಕ್ಷದಿಂದ ಯಾರೂ ಎಲ್ಲಿಗೂ ಹೋಗುವುದಿಲ್ಲ ಎಂದು ಉಚ್ಚರಿಸಿದರು.