ಬೆಳಗಾವಿ[ಡಿ.10] ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಇನ್ನೊಂದು ಕಡೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶ್ರೀರಾಮುಲು ಭೇಟಿಯಾಗಿ ರಹಸ್ಯ ಚರ್ಚೆ ನಡೆಸಿದ್ದಾರೆ.  ಕೆಲ ದಿನಗಳ ಹಿಂದೆ ಇದೇ ಸತೀಶ್ ಜಾರಕಿಹೊಳಿ ರೆಸಾರ್ಟ್ ನೋಡಿಕೊಂಡು ಬಂದು ಮಾತನಾಡಿದ್ದರು.

ರೆಸಾರ್ಟ್‌ಗೆ ಹೋಗಿ ಬಂದಿದ್ದೇನೆ! ಜಾರಕಿಹೊಳಿ ಹೊಸ ಬಾಂಬ್

ಸಚಿವ ಸಂಪುಟ ವಿಸ್ತರಣೆ ಡಿಸೆಂಬರ್‌ 22 ಕ್ಕೆ ಮಾಡಲಾಗುವುದು ಎಂದು ಹೇಳಿರುವ ದೋಸ್ತಿ ಸರ್ಕಾರದ ಪ್ರಮುಖರು ಯಾರಿಗೆ ಸಂಪುಟದಲ್ಲಿ ಸ್ಥಾನ ಎಂಬ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಆಪರೇಶನ್ ಕಮಲ ತಡೆಯುವ ಇರಾದೆ ಇದರ ಹಿಂದೆ ಇದೆಯಾದರೂ ಪ್ರಮುಖ ನಾಯಕರ ಭೇಟಿ ಮತ್ತು ರಹಸ್ಯ ಚರ್ಚೆ ಹೊಸ ಬೆಳವಣಿಗೆಗೆ ಅವಕಾಶ ಮಾಡಿಕೊಡಲೂಬಹುದು.