ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಅಲ್ಪಸಂಖ್ಯಾತರಲ್ಲಿ ಮನೆ ಮಾಡಿದ್ದ ಭಯವನ್ನು ತಮ್ಮ ಮಾತುಗಳ ಮೂಲಕ ಹೋಗಲಾಡಿಸಿದ್ದಾರೆಂದು ಕಾಂಗ್ರೆಸ್‌ನ ಹಿರಿಯ ನಾಯಕ ರೋಷನ್‌ ಬೇಗ್‌ ಅವರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಮ್ಮೆ ಇರಿಸುಮುರುಸು ಉಂಟುಮಾಡಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶಕ್ಕಿಂತ ಮೊದಲು ಹಾಗೂ ನಂತರ ಟ್ವೀಟರ್‌ನಲ್ಲಿ ಹಾಗೂ ಬಹಿರಂಗವಾಗಿ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ರೋಷನ್‌ ಬೇಗ್‌ ಮತ್ತೊಮ್ಮೆ ದೇಶದ ಅಲ್ಪಸಂಖ್ಯಾತರ ಕುರಿತು ಪ್ರಧಾನಿ ಆಡಿರುವ ಮಾತುಗಳನ್ನು ಸ್ವಾಗತಿಸಿದ್ದಾರೆ.

 

ಸೆಂಟ್ರಲ್‌ ಹಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳು ಸಂತೋಷ ನೀಡಿವೆ. ಅವರು ಪ್ರಮಾಣವಚನ ಸ್ವೀಕರಿಸುವುದಕ್ಕೂ ಮೊದಲೇ ಏಕತೆಯ ಪ್ರತಿಪಾದನೆ ಮಾಡಿದ್ದಾರೆ. ಇದು ಇಡೀ ಭಾರತವೇ ಒಂದು ಎಂಬುದರತ್ತ ಮೊದಲ ಹೆಜ್ಜೆ ಇಟ್ಟಂತೆ ತೋರುತ್ತದೆ. ಅಲ್ಲದೆ ಹಲವು ವರ್ಷಗಳಿಂದ ಅಲ್ಪಸಂಖ್ಯಾತರಲ್ಲಿ ಮನೆ ಮಾಡಿದ್ದ ಭಯವನ್ನು ಅವರು ತಮ್ಮ ಮಾತುಗಳ ಮೂಲಕ ಹೋಗಲಾಡಿಸಿದರು. ಸಮಗ್ರ ಭಾರತದಲ್ಲಿ ಅವರು ನುಡಿದಂತೆ ನಡೆಯಲಿದ್ದಾರೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.

ಮುಂದಿನ 20 ವರ್ಷ ಬಿಜೆಪಿಯದ್ದೇ ಸರ್ಕಾರ!

ಅವರು ಅಲ್ಪಸಂಖ್ಯಾತರ ವಿಶ್ವಾಸ ಗಳಿಸಬೇಕು ಎಂದು ಸಂಸದರಿಗೆ ನೀಡಿರುವ ಕರೆ ರಾಜಕೀಯ ಉದ್ದೇಶಕ್ಕಾಗಿ ಅಥವಾ ಅಲ್ಪಸಂಖ್ಯಾತ ಸಮುದಾಯವನ್ನು ಮತ ಬ್ಯಾಂಕ್‌ ಆಗಿ ಮಾಡಿಕೊಳ್ಳಲು ಹೇಳಿದಂತೆ ಕಾಣಿಸುವುದಿಲ್ಲ. ಏಕೆಂದರೆ ಅವರು ಚುನಾವಣೆ ಮುಗಿದು ಗೆಲುವು ಸಾಧಿಸಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಈ ಮಾತು ಹೇಳಿದ್ದಾರೆ. ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಾದ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ರಾಜ್ಯದ ಮೂವರು ನಾಯಕರಿಗೆ ಕೇಂದ್ರ ಸಚಿವ ಸ್ಥಾನ