ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಚನೆಯಾಗಲಿರುವ ಎನ್‌ಡಿಎ- 2 ಸರ್ಕಾರದಲ್ಲಿ ರಾಜ್ಯದ ಮೂವರು ಬಿಜೆಪಿ ಸಂಸದರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ ಹಾಗೂ ಶಿವಕುಮಾರ್ ಉದಾಸಿ ಹೆಸರು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. 

ಇವರ ಜತೆ ಉಮೇಶ್ ಜಾಧವ್, ಸದಾನಂದಗೌಡ ಅವರೂ ರೇಸ್‌ನಲ್ಲಿದ್ದಾರೆ. ಮೋದಿ ಅವರು  2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಮೇ 30ರಂದು ಪ್ರಮಾಣ ಸ್ವೀಕರಿಸಲಿದ್ದಾರೆ. 

ಈ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ಮೋದಿ ಸಂಪುಟ ಸೇರಬಹುದಾದ ಸಚಿವರ ಪ್ರಾಥಮಿಕ ಪಟ್ಟಿ ತಯಾರಿಸುವಲ್ಲಿ ನಿರತರಾಗಿದ್ದಾರೆ.