ಹೊಸಕೋಟೆ[ಸೆ.21]: ಕಾಂಗ್ರೆಸ್ ಪಕ್ಷ ಹೊಸಕೋಟೆಯಲ್ಲಿ ಸ್ವಾಭಿಮಾನ ಸಮಾವೇಶ ಹಮ್ಮಿಕೊಂಡಿದ್ದು, ಈ ವೇಳೆ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಶಾಶಕ ಎಂಟಿಬಿ ನಾಗರಾಜ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಕಾಂಗ್ರೆಸ್ ಗೆ ತಾಳಿ ಕಟ್ಟಿ  ಮತ್ತೊಬ್ಬರ ಜೊತೆ ಸಂಸಾರ ಮಾಡಿದ್ರೆ ಹಳ್ಳಿ ಭಾಷೆಯಲ್ಲಿ ಏನು ಹೇಳ್ತಾರೆ..? ' ಎಂದು ಪ್ರಶ್ನಿಸಿದ್ದಾರೆ.

ಹೌದು ಹೊಸಕೋಟೆಯ ಸ್ವಾಭಿಮಾನಿ ಸಮಾವೇಶದಲ್ಲಿ ಶಾಸಕರನ್ನು ಅನರ್ಹಗೊಳಿಸಿದ ವಿಚಾರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ 'ನಾನು ಸ್ಪೀಕರ್ ಆಗಿ ಕರ್ತವ್ಯ ಪಾಲನೆ ಮಾಡಬೇಕಾದಾಗ ಸಂವಿಧಾನ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಯಾರಿಗೂ ತೊಂದರೆ ಕೊಡೋದಕ್ಕೆ ಆ ಕೆಲಸ ಮಾಡಿಲ್ಲ. ಹಸಿವಿವಿನಿಂದ ಇದ್ದರೂ ಬೇರೆಯವರ ಮನೆಗೆ ಹೋಗಿ ಹಲ್ಲು ಗಿಂಜಬಾರದು. ಪ್ರಾಣ ಕಳೆದುಕೊಂಡ್ರು ಮಾನ  ಕಳೆದುಕೊಳ್ಳಬಾರದು. ಇದನ್ನ ಸ್ವಾಭಿಮಾನಿ ಬದುಕು ಎಂದು ಕರೆಯಲಾಗತ್ತೆ' ಎನ್ನುವ ಮೂಲಕ ಅನರ್ಹ ಶಾಸಕರಿಗೆ ಟಾಂಗ್ ನೀಡಿದ್ದಾರೆ.

‘ಅವನ್ಯಾವನೋ ಬಚ್ಚಾ... ಅವನ ಬಳಿ ಚಡ್ಡಿಗೆ ದುಡ್ಡು ಇರ್ಲಿಲ್ಲಾ’ ತುಮಕೂರಿನಲ್ಲಿ ಚಡ್ಡಿ ರಾಜಕೀಯ!

ಇದೇ ಸಂದರ್ಭದಲ್ಲಿ ಎಂಟಿಬಿ ವಿರುದ್ಧ ಕಿಡಿ ಕಾರಿದ ರಮೇಶ್ ಕುಮಾರ್ 'ಎಂಟಿಬಿ ಗೆ ಟಾಂಗ್ ಕೊಟ್ಟ ರಮೇಶ್ ಕುಮಾರ್ ತಾಳಿಯನ್ನು‌ ಕಾಂಗ್ರೆಸ್ ಗೆ ಕಟ್ಟಿ ಮತ್ತೊಬ್ಬರ ಜೊತೆ ಸಂಸಾರ ಮಾಡುತ್ತಿದ್ದಾರೆ. ಮದುವೆ ಒಬ್ಬರ ಜೊತೆ ಮಾಡಿಕೊಂಡು ಮತ್ತೊಬ್ಬರ ಜೊತೆ ಸಂಸಾರ ಮಾಡಿದ್ರೆ ಏನು ಹೇಳ್ತಾರೆ ಹಳ್ಳಿ ಭಾಷೆಯಲ್ಲಿ..? ಮದುವೆಯಾಗಿ ಹುಟ್ಟಿದ ಮಕ್ಕಳನ್ನ ಶಾಲೆಯಲ್ಲಿ ತಂದೆ ತಾಯಿ ಹೆಸರು ಬರೆಸಬಹುದು ಆದರೆ ಅಡ್ರೆಸ್ ಇಲ್ಲದಿದ್ದವರಿಗೆ ಏನಂತ ಬರಿಸೋದು..?' ಎಂದು ಪ್ರಶ್ನಿಸಿದ್ದಾರೆ.