ಕಲಬುರಗಿ  : ಬಿಜೆಪಿ ನಾಯಕ ಉಮೇಶ್ ಜಾಧವ್ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜಾಧವ್ ಬಿಜೆಪಿಯಿಂದ ಐದು ಕೋಟಿ ಪಡೆದಿದ್ದಾರೆ ಎನ್ನುವ ಹೇಳಿಕೆ ನನ್ನದಲ್ಲ. ಚಿಂಚೋಳಿ ಜನರು ಹೀಗೆ ಹೇಳುತ್ತಿದ್ದಾರೆ. ಧೈರ್ಯ ಇದ್ದರೆ ಚಿಂಚೋಳಿ ಜನರಿಗೆ ಅವರು ಪ್ರತಿಕ್ರಿಯೆ ನೀಡಲಿ ಎಂದರು. 

ಮಾನನಷ್ಟ ಮೊಕದ್ದಮ್ಮೇ ಹೂಡುವುದಾಗಿ ಹೇಳಿದ ಜಾಧವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನನಗೂ ಲಾ ಗೊತ್ತು. ನಾನು ಕೂಡ ಲಾ ಪೂರ್ಣಗೊಳಿಸಿದ್ದೇನೆ ಎಂದರು. 

ಇನ್ನು ಕೈ ತೊರೆದು ಬಿಜೆಪಿಗೆ ತೆರಳಿದ ಉಮೇಶ್ ಜಾಧವ್ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಯಾಕೆ ಹೋದರು ಎಂದು ಐದು ಕಾರಣ ನೀಡಲಿ ಎಂದು ಜಾಧವ್ ಗೆ ಸವಾಲು ಹಾಕಿದರು.