ಕಲಬುರಗಿ [ಮಾ. 17] ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮೈಬಿ ಚೌಕಿದಾರ ಬಿಜೆಪಿ ಅಭಿಯಾನಕ್ಕೆ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇವರು ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಚೌಕಿದಾರ. ದೇಶವನ್ನು ರಕ್ಷಿಸುವ ಬದಲು ಕಳ್ಳರಿಗೆ ನೀಡುತ್ತಿರುವ ಈ ಚೌಕಿದಾರ. ರೈತರ ಸಾಲ ಮನ್ನಾ ಮಾಡಲು ಆಗೋದಿಲ್ಲ ಅಂದ್ರು ಆದ್ರೆ ದೊಡ್ಡ ದೊಡ್ಡ ಕಂಪೆನಿಗಳಿಗೆ ಕೋಟಿಗಟ್ಟಲೇ ಸಾಲ ಮನ್ನಾ ಮಾಡಿದ್ದರು. ರೈತರ ಅಕೌಂಟ್ ಗೆ ಎರಡು ಸಾವಿರ ರೂ. ನೀಡುತ್ತಿರುವುದೂ ಸಹ ಚುನಾವಣೆ ಸಂದರ್ಭದಲ್ಲಿ. ಒಂದು ದಿನಕ್ಕೆ ಲೆಕ್ಕ ಹಾಕಿದರೆ ಒಂದು ಟೀ ಸಹ ಬರುವುದಿಲ್ಲ ಎಂದರು.

ಉತ್ತರ ಕನ್ನಡ 'ಕೈ'ಗೆ,   ಹೆಗಡೆ ವಿರುದ್ಧ ದೋಸ್ತಿ ಅಭ್ಯರ್ಥಿ ಬದಲು?

ಜನರ ಹಣ ಕಳ್ಳತನ ಮಾಡಿ ಕೆಲವೇ ಉದ್ಯಮಿಗಳಿಗೆ ಕೊಡುವುದೇ ಚೌಕಿದಾರ ಕೆಲಸವಾಗಿದೆ. ಹಾಗಾಗಿಯೇ ನಾವು ಚೌಕಿದಾರ ಚೋರ್ ಹೈ ಅಂದಿದ್ದು. ಚುನಾವಣಾ ಹೊಸ್ತಿಲಲ್ಲಿ ಲೋಕಪಾಲ ರಚನೆ ಸರಿಯಲ್ಲ. ಇಷ್ಟು ದಿನ ಇವರು ಯಾಕೆ ಸುಮ್ಮನಿದ್ದರು ಎಂದು ಪ್ರಶ್ನೆ ಮಾಡಿದರು.