ಬೆಂಗಳೂರು(ಜು.14 )  ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಮುಂಬೈ ವಿಮಾನ ಏರುವಾಗ ಬಿಜೆಪಿ ನಾಯಕ ಆರ್. ಅಶೋಕ್ ಕಾಣಿಸಿಕೊಂಡಿದ್ದು ದೋಸ್ತಿ ಸರ್ಕಾರದ  ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಕೆರಳಿಸಿದೆ.

ಆರ್.ಅಶೋಕ್ ಮತ್ತು ಬಿಜೆಪಿ ಮೇಲೆ ಎಂಟಿಬಿ ವಾಗ್ದಾಳಿ ಮಾಡಿದ್ದಾರೆ.  ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸ್ನೇಹಿತರು ಎಲ್ಲರಿಗೂ ಕಿವಿ ಮೇಲೆ ಹೂ ಇಡುತ್ತಿದ್ದರು.

ಎಲ್ಲ ಸಮಸ್ಯೆಗಳಿಗೂ ಕಾರಣ ರೇವಣ್ಣ


ನಮಗೂ ಇದಕ್ಕೂ ಸಂಬಂಧವಿಲ್ಲ, ಇದು ಅವರ ಪಕ್ಷದ ಇಂಟರ್ನಲ್ ವಿಚಾರ, ನಾವು ಯಾವುದಕ್ಕೂ ತಲೆ ಹಾಕಲ್ಲ ಅಂತಿದ್ರು. ಹೋಟಲ್, ಬಾಂಬೆ, ಫ್ಲೈಟ್,ದೆಹಲಿ, ಏರ್ ಪೋರ್ಟ್ ಅರೇಂಜ್ ಮೆಂಟ್ ಸೇರಿದಂತೆ ಎಲ್ಲವನ್ನು ಮಾಡಿದ್ದು ಅವರೇ ಎಂದು ಇದೀಗ ಜಗತ್ತಿಗೆ ಗೊತ್ತಾಗಿದೆ ಎಂದರು.

ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನ ಒಪ್ಪಿಕೊಳ್ಳಬೇಕು. ನಾವು ಮಾಡ್ತಿದ್ದೇವೆ, ಈ ಆಪರೇಷನ್ ನಮ್ಮದೆ, ನಮಗೆ ಚೇರ್ ಬೇಕು ಅಂತ ಬಿಜೆಪಿ ನಾಯಕರು ‌ಒಪ್ಪಿಕೊಳ್ಳಬೇಕು. ಪಂಚಾಯ್ತಿಗಳಲ್ಲಿ ನಡೆದಹಾಗೆ ನಾವು ಮಾಡ್ತಿದ್ದೇವೆ ಅಂತ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.

ನಾವು ಶಾಂತಿಪ್ರಿಯರು ಅಂತ ಬಿಜೆಪಿಯವರು ಇಂತಹ ಕೆಲಸ ಮಾಡಿದ್ದಾರೆ. ಜನರು ಎಲ್ಲವನ್ನು ನೋಡುತ್ತಿದ್ದಾರೆ. ನಮಗೆ ಈಗಲೂ ವಿಶ್ವಾಸವಿದೆ. ವಿಶ್ವಾಸಮತ ಸಂದರ್ಭದಲ್ಲಿ ನಮ್ಮ ಶಾಸಕರು ನಮಗೆ ಬೆಂಬಲ ನೀಡ್ತಾರೆ. ಈಗಾಗ್ಲೆ ಕಾರ್ಯಕರ್ತರು, ಜನರು ಶಾಸಕರಿಗೆ ರಾಜಿನಾಮೆ ನೀಡದಂತೆ ಮನವಿ ಮಾಡ್ತಿದ್ದಾರೆ. ನಮ್ಮ ಶಾಸಕರಿಗೆ ಕರುಣೆ ಬಂದು ನಮ್ಮ ಸರ್ಕಾರ ಉಳಿಸಿಕೊಳ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.