ಇತ್ತೀಚೆಗಷ್ಟೇ ನಾಥದ್ವಾರ ಕ್ಷೇತ್ರದ ಸೇಮಾ ಎಂಬ ಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಜಾತಿ ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಮುಖ್ಯ ಚುನಾವಣಾ ಅಧಿಕಾರಿ ಆನಂದ್ ಕುಮಾರ್ ಆದೇಶದ ಮೇರೆಗೆ ನಾಥದ್ವಾರದ ಅಧಿಕಾರಿ ಸಿ. ಪಿ ಜೋಶಿಗೆ ನೊಟೀಸ್ ಜಾರಿಗೊಳಿಸಿ ನವೆಂಬರ್ 25ರೊಳಗಾಗಿ ಈ ವಿಚಾರವಾಗಿ ಸ್ಪಷ್ಟೀಕರಣ ನೀಡಲು ಸೂಚಿಸಿದ್ದಾರೆ.
ಜೈಪುರ[ನ.24]: ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದೆ. ದಿನಗಳೆದಂತೆ ಚುನಾವಣಾ ಕಣ ರಂಗೇರುತ್ತಿದೆದೆ. ಕಾಂಗ್ರೆಸ್ ಬಿಜೆಪಿ ಪಕ್ಷಗಳೆರಡೂ ಪರಸ್ಪರ ರಾಜಕೀಯ ಕೆಸರೆರಚಾಟ ನಡೆಸುತ್ತಿವೆ. ಆದರೀಗ ಈ ವಾಗ್ದಾಳಿಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಡಾ. ಸಿ. ಪಿ ಜೋಶಿಗೆ ಮಾತ್ರ ಸಮಸ್ಯೆ ಎದುರಾಗಿದೆ. ಇತ್ತೀಚೆಗಷ್ಟೇ ನಾಥದ್ವಾರ ಕ್ಷೇತ್ರದ ಸೇಮಾ ಎಂಬ ಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಜಾತಿ ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಮುಖ್ಯ ಚುನಾವಣಾ ಅಧಿಕಾರಿ ಆನಂದ್ ಕುಮಾರ್ ಆದೇಶದ ಮೇರೆಗೆ ನಾಥದ್ವಾರದ ಅಧಿಕಾರಿ ಸಿ. ಪಿ ಜೋಶಿಗೆ ನೊಟೀಸ್ ಜಾರಿಗೊಳಿಸಿ ನವೆಂಬರ್ 25ರೊಳಗಾಗಿ ಈ ವಿಚಾರವಾಗಿ ಸ್ಪಷ್ಟೀಕರಣ ನೀಡಲು ಸೂಚಿಸಿದ್ದಾರೆ.
ಇದನ್ನೂ ಓದಿ: ಮೋದಿ ಜಾತಿ ವಿವಾದ: ಕ್ಷಮೆ ಯಾಚಿಸಲು 'ಕೈ' ಮುಖಂಡನಿಗೆ ರಾಹುಲ್ ಆದೇಶ
ಡಾ. ಸಿ. ಪಿ ಜೋಶಿಯವರ ಸ್ಪಷ್ಟೀಕರಣ ಪಡೆದ ಬಳಿಕವೇ ಹೇಳಿಕೆ ಯಾವ ಸನ್ನಿವೇಶದಲ್ಲಿ ನೀಡಿದ್ದರು ಹಾಗೂ ಶಿಸ್ತು ಕ್ರಮದ ಉಲ್ಲಂಘನೆಯಾಗುತ್ತದೆಯೇ ಎಂಬುವುದು ನಿರ್ಧಾರವಾಗಲಿದೆ. ಒಂದು ವೇಳೆ ಕ್ಷೇತ್ರ ಚುನಾವಣಾ ಅಧಿಕಾರಿಗೆ ಸಿ. ಪಿ ಜೋಶಿ ಶಿಸ್ತು ಕ್ರಮ ಉಲ್ಲಂಘಿಸಿದ್ದಾರೆಂದು ಅನಿಸಿದರೆ, ಅವರ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ.
ವಿವಾದಾತ್ಮಕ ಹೇಳಿಕೆ
ಕಾಂಗ್ರೆಸ್ ಹಿರಿಯ ನಾಯಕ ಸಿ. ಪಿ ಜೋಶಿ ಬುಧವಾರದಂದು ನಾಥದ್ವಾರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ, ಪ್ರಧಾನಿ ಮೋದಿ ಹಾಗೂ ಉಮಾಭಾರತಿ ಜಾತಿಯನ್ನು ಪ್ರಶ್ನಿಸಿದ್ದರು. ತೀವ್ರ ವಾಗ್ದಾಳಿ ನಡೆಸಿದ್ದ ಜೋಶಿ 'ಬಿಜೆಪಿ ಯಾವತ್ತೂ ಕಾಂಗ್ರೆಸ್ ನ್ನು ಮುಸ್ಲಿಂಮರ ಪಕ್ಷ ಎನ್ನುತ್ತದೆ. ನಮಗೆ ಸರ್ಟಿಫಿಕೇಟ್ ನೀಡಲು ಅವರು ಯಾರು? ಪ್ರಧಾನಿ ಮೋದಿ ಹಾಗೂ ಉಮಾ ಭಾರತಿಯ ಜಾತಿ ಯಾವುದು?' ಎಂದು ಪ್ರಶ್ನಿಸಿದ್ದರು. ಇದಾದ ರಾಜಕೀಯ ವಲಯದಲ್ಲಿ ಜೋಶಿ ವಿರುದ್ಧ ಹಲವಾರು ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಜೋಶಿ ಹೇಳಿಕೆಗೆ ಕಾಂಗ್ರೆಸ್ ವಿರೋಧ
ಕಾಂಗ್ರೆಸ್ ಈಗಾಗಲೇ ಜೋಶಿ ಹೇಳಿಕೆಯನ್ನು ಖಂಡಿಸಿದೆ. ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಜೋಶಿ ಪಕ್ಷದ ಸಿದ್ಧಾಂತಗಳನ್ನು ವಿರೋಧಿಸುವ ಹೇಳಿಕೆ ನೀಡಿದ್ದು, ಅವರು ಕ್ಷಮೆ ಯಾಚಿಸಬೇಕು' ಎಂದು ಒತ್ತಾಯಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಜೋಶಿ ತಮ್ಮ ಟ್ವಟರ್ ಖಾತೆಯಲ್ಲಿ ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು.
