ಲೋಕಸಭೆಯಲ್ಲಿ ಮಾಡಿದ ಬಜೆಟ್ ಭಾಷಣಕ್ಕೆ ಪ್ರತಿಪಕ್ಷಗಳಿಂದದ ಅಪಾರ ಟೀಕೆಗಳು ವ್ಯಕ್ತವಾಗಿದ್ದು, ಈ ಬೆನ್ನಲ್ಲೇ ಪ್ರಧಾನಿ ಮೋದಿ ರಾಜ್ಯ ಸಭೆಯಲ್ಲಿ ಆ ಎಲ್ಲ ಆರೋಪಗಳಿಗೆ ಉತ್ತರಿಸಲು ಯತ್ನಿಸಿದರು.
ನವದೆಹಲಿ: ಲೋಕಸಭೆಯಲ್ಲಿ ಮಾಡಿದ ಬಜೆಟ್ ಭಾಷಣಕ್ಕೆ ಪ್ರತಿಪಕ್ಷಗಳಿಂದದ ಅಪಾರ ಟೀಕೆಗಳು ವ್ಯಕ್ತವಾಗಿದ್ದು, ಈ ಬೆನ್ನಲ್ಲೇ ಪ್ರಧಾನಿ ಮೋದಿ ರಾಜ್ಯ ಸಭೆಯಲ್ಲಿ ಆ ಎಲ್ಲ ಆರೋಪಗಳಿಗೆ ಉತ್ತರಿಸಲು ಯತ್ನಿಸಿದರು.
'ಆರೋಗ್ಯ ಕ್ಷೇತ್ರದಲ್ಲಿ ಸರಕಾರಿ ತಂದಿರುವ ಸುಧಾರಣೆಗಳಿಗೆ ಅಮೆರಿಕ, ಇಂಗ್ಲೆಂಡ್ ಅನ್ನು ಅನುಸರಿಸಲಾಗಿದೆ ಎಂದಿದೆ ಕಾಂಗ್ರೆಸ್. ಆದರೆ, ಅವರ ಸಮಾಜಕ್ಕೂ, ಭಾರತೀಯರ ಭಾವನೆಗಳಿಗೂ ಅಪಾರ ವ್ಯತ್ಯಾಸವಿದೆ. 50 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಇವೆಲ್ಲ ಮರೆತೇ ಹೋಗಿದೆ,' ಎಂದರು.
'ಬಿಜೆಪಿ ನೇಮ್ ಚೇಂಜರ್ ಅಷ್ಟೇ, ಗೇಮ್ ಚೇಂಜರ್ ಅಲ್ಲವೆಂದಿದೆ. ಆದರೆ, ನಮ್ಮ ಕಾರ್ಯವೈಖರಿಯನ್ನು ಗಮನಿಸಿದರೆ, ನಮ್ಮ ಗುರಿ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ನಮ್ಮ ಕಾರ್ಯಕ್ರಮಗಳಿಗೆ ತಕ್ಕ ನಕ್ಷೆ ಹಾಕಿಕೊಂಡು, ದೇಶವನ್ನು ಪ್ರಗತಿಯೆಡೆಗೆ ಕೊಂಡೋಯ್ಯುತ್ತಿದ್ದೇವೆ,' ಎಂದು ಹೇಳಿದರು.
'ಕಾಂಗ್ರೆಸ್ಸಿನಂತೆ ನನಗೂ ಗಾಂಧೀಜಿ ಬಯಸಿದ ಭಾರತ ಬೇಕು. ಸ್ವಾತಂತ್ರ್ಯ ಸಿಕ್ಕ ನಂತರ ಕಾಂಗ್ರೆಸ್ಸಿನ ಅಗತ್ಯವಿಲ್ಲವೆಂದು ಅವರು ಹೇಳಿದ್ದರು. ನಾವೂ ಗಾಂಧಿ ತತ್ವದಿಂದಲೇ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮುಂದಾಗಿದ್ದೇವೆ,' ಎಂದು ಹೇಳಿದರು.
'ಬಿಜೆಪಿಯನ್ನು ದೂಷಿಸುವ ಭರದಲ್ಲಿಯೇ ಭಾರತವನ್ನು ಕೆಟ್ಟ ದೃಷ್ಟಿಯಲ್ಲಿಯೇ ಕಾಂಗ್ರೆಸ್ ನೋಡುತ್ತಿದೆ. ನನ್ನ ಮೇಲೆ ದಾಳಿ ನಡೆಸುವ ಬದಲು, ಹಿಂದೂಸ್ತಾನವನ್ನೇ ದೂಷಿಸುತ್ತಿದ್ದೀರಿ,' ಎಂದು ಮೋದಿ ಹೇಳಿದರು.
