ಬಿಜೆಪಿಯವರು ರಾಮಾನಾಥ ಕೋವಿಂದ ಅವರನ್ನು ರಾಷ್ಟ್ರಪತಿ, ಸಾತ್ವಿ ನಿರಂಜನ್ ಅವರನ್ನು ಕೇಂದ್ರದ ಸಚಿವೆಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ  ಕರ್ನಾಟಕದ ಕೋಲಿ ಸಮಾಜದ ವತಿಯಿಂದ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 

ಯಾದಗಿರಿ[ಆ.28]: ಕಾಂಗ್ರೆಸಿನ ಹಿರಿಯ ನಾಯಕ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುವರ್ಣ ನ್ಯೂಸ್ .ಕಾಂ ಸೋದರ ಸಂಸ್ಥೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಅವರು,ಸ್ವಾತಂತ್ರ್ಯ ಸಿಕ್ಕಿ 72 ವರ್ಷ ಆದರೂ ನಮ್ಮ ಸಮಾಜಗಳಾದ ಕೋಲಿ, ಕಬ್ಬಲಿಗ, ಅಂಬಿಗ ಸಮಾಜದವರನ್ನು ಕಾಂಗ್ರೆಸ್ ಗುರುತಿಸಿಲ್ಲ. ಭಾರತೀಯ ಜನತಾ ಪಕ್ಷ ಗುರುತಿಸಿದ್ದು ಇದಕ್ಕಾಗಿ ಬಿಜೆಪಿ ಸರ್ಕಾರಕ್ಕೆ ಅಭಿನಂನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿಯವರು ರಾಮಾನಾಥ ಕೋವಿಂದ ಅವರನ್ನು ರಾಷ್ಟ್ರಪತಿ, ಸಾತ್ವಿ ನಿರಂಜನ್ ಅವರನ್ನು ಕೇಂದ್ರ ಸಚಿವೆಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ ಕರ್ನಾಟಕದ ಕೋಲಿ ಸಮಾಜದ ವತಿಯಿಂದ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಯಾವುದೇ ಆಸೆ ಇಟ್ಟಿಕೊಂಡು ಬಿಜೆಪಿ ಸೇರುತ್ತಿಲ್ಲ. ನನಗೆ ಎರಡೇ ಆಸೆ ಇರುವುದು. ಒಂದು ಗುರುಮಿಠಕಲ್ ಜನರ ಸೇವೆ ಮಾಡುವುದು ಹಾಗೂ ನಮ್ಮ ಸಮುದಾಯವನ್ನು ಪ.ಪಂಗಡಕ್ಕೆ ಸೇರಿಸುವುದು ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

ನಾನು ಎರಡು ಸಲ ಕಾಂಗ್ರೆಸ್ ಮಂತ್ರಿಯಾಗಿದ್ದೆ. ಎಐಸಿಸಿ ಸದಸ್ಯನಾಗಿದ್ದೆ. ಕೆಪಿಸಿಸಿ ಕಾರ್ಯದರ್ಶಿ ಯಾಗಿ ಕೆಲಸ ಮಾಡಿದ್ದೇನೆ. ನನ್ನ ವರ್ಚಸ್ಸು ನೋಡಿ ನನಗಾಗದವರು ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ.ಇದಕ್ಕೆ ನೇರವಾಗಿ ಕಾಂಗ್ರೆಸಿನವರೆ ಕಾರಣ. ಇವೆಲ್ಲ ಕಾರಣದಿಂದ ಬಿಜೆಪಿಗೆ ಸೇರುತ್ತಿದ್ದೇನೆ ಎಂದು ತಿಳಿಸಿದರು.