ಪಣಜಿ :  ‘ರಫೇಲ್‌ ವ್ಯವಹಾರದ ರಹಸ್ಯ ಕಡತ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಅವರ ಮನೆಯ ಬೆಡ್‌ರೂಮಲ್ಲಿವೆ’ ಎಂಬ ಗೋವಾ ಸಚಿವ ವಿಶ್ವಜಿತ್‌ ರಾಣೆ ಧ್ವನಿಯುಳ್ಳ ಆಡಿಯೋ ಟೇಪ್‌ ಬಿಡುಗಡೆಯಾದ ಬಗ್ಗೆ ಪರ್ರಿಕರ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಗೋವಾ ಕಾಂಗ್ರೆಸ್‌, ‘ಪರ್ರಿಕರ್‌ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಅವರ ಮನೆಯನ್ನು ಶೋಧಿಸಬೇಕು’ ಎಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಾ ಕಾಂಗ್ರೆಸ್‌ ವಕ್ತಾರ ಸಿದ್ಧಾಂತ ಬುಯಾವೋ ಅವರು, ‘ರಫೆಲ್‌ ಡೀಲ್‌ ರಹಸ್ಯವು ಪರ್ರಿಕರ್‌ ಮನೆಯ ಶಯನಗೃಹದಲ್ಲಿ ಇದೆ. 

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಹಾಗೂ ಸಿಬಿಐಗೆ ಈ ಬಗ್ಗೆ ಶೋಧ ಕಾರ್ಯ ನಡೆಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಆಗ ಸತ್ಯ ಹೊರಬರಲಿದೆ’ ಎಂದರು.