ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್ಯಾಲಿಯಲ್ಲಿ ‘ದೀಪಾವಳಿ-ರಂಜಾನ್’ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ನಿಯೋಗವು ಚುನಾವಣಾ ಆಯೋಗವನ್ನು ಇಂದು ಸಂಜೆ 5 .30 ಭೇಟಿ ಮಾಡುವುದನ್ನು ಮುಂದೂಡಲಾಗಿದೆ. ಮುಂದಿನ ನೋಟಿಸ್ ಬರುವವರೆಗೆ ಸಮಯ ನಿಗದಿಯಾಗಿಲ್ಲ.

ನವದೆಹಲಿ (ಫೆ.20): ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್ಯಾಲಿಯಲ್ಲಿ ‘ದೀಪಾವಳಿ-ರಂಜಾನ್’ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ನಿಯೋಗವು ಚುನಾವಣಾ ಆಯೋಗವನ್ನು ಇಂದು ಸಂಜೆ 5 .30 ಭೇಟಿ ಮಾಡುವುದನ್ನು ಮುಂದೂಡಲಾಗಿದೆ. ಮುಂದಿನ ನೋಟಿಸ್ ಬರುವವರೆಗೆ ಸಮಯ ನಿಗದಿಯಾಗಿಲ್ಲ.

ಕೇಂದ್ರ ಸಚಿವ ಕಪಿಲ್ ಸಿಬಲ್, ರಾಜ್ಯಸಭಾ ಪ್ರತಿಪಕ್ಷ ನಾಯಕ ಆನಂದ್ ಶರ್ಮಾ, ರಾಜ್ಯಸಭಾ ಸಂಸದ ಸತ್ಯವ್ರತ್ ಚತುರ್ವೇದಿ, ಮಾನವ ಹಕ್ಕು ಆಯೋಗದ ಕೆ.ಸಿ ಮಿತ್ತಲ್ ರನ್ನು ಕಾಂಗ್ರೆಸ್ ನಿಯೋಗ ಒಳಗೊಂಡಿದೆ.

ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದೇವೆ. ಬಿಜೆಪಿ ಚಿಹ್ನೆಯನ್ನು ಅಮಾನ್ಯಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ. ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಶಕ್ತಿಯನ್ನು ಪ್ರದರ್ಶಿಸಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲಿದೆ ಎನ್ನುವ ನಂಬಿಕೆ ನಮಗಿದೆ. ಪಕ್ಷದ ಚಿಹ್ನೆ ಕಮಲವನ್ನು ಅಮಾನ್ಯಗೊಳಿಸಬೇಕು ಎಂದು ಕೆ.ಸಿ ಮಿತ್ತಲ್ ಹೇಳಿದ್ದಾರೆ.

ರಂಜಾನ್ ನಲ್ಲಿ ವಿದ್ಯುತ್ ಇದ್ದರೆ ದೀಪಾವಳಿಯಲ್ಲೂ ಇರಬೇಕು. ಭೇದ-ಭಾವ ಇರಬಾರದು. ಗ್ರಾಮದಲ್ಲಿ ಕಬರಸ್ಥಾನ ಮಾಡಿದರೆ ಸ್ಮಶಾನವನ್ನೂ ಮಾಡಬೇಕು ಎಂದು ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಹೇಳಿಕೆ ನೀಡ