Asianet Suvarna News Asianet Suvarna News

ಪ್ರಧಾನಿ ಮೋದಿಯವರದ್ದು ಹೇಡಿತನದ ಕ್ರಮ: ಕಾಂಗ್ರೆಸ್

ಇಂದು ಬೆಳಗ್ಗೆ ಸಂಸತ್ ಭವನದಲ್ಲಿ ನಡೆದ ಸಂವಿಧಾನ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ವಿಪಕ್ಷಗಳಿಗೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೋಟು ನಿಷೇಧಿಸುವ ಮುಂಚೆ ಸರ್ಕಾರ ಸಿದ್ಧತೆ ಮಾಡಿಕೊಳ್ಳಲಿಲ್ಲವೆಂದು ವಿಪಕ್ಷದವರು ಹೇಳುತ್ತಿದ್ದಾರೆ. ವಾಸ್ತವದಲ್ಲಿ, ದುಖ:ವಾಗಿರುವುದು ಅವರಿಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಗಲಿಲ್ಲವೆಂಬ ಕಾರಣಕ್ಕಾಗಿ ಎಂದು ಮೋದಿ ಹೇಳಿದ್ದರು.  

Congress Dares PM to Speak in Parliament Over Demonetization

ನವದೆಹಲಿ (ನ.25): ಪ್ರಧಾನಿ ನರೇಂದ್ರ ಮೋದಿ ಇಂದು ಕಪ್ಪುಹಣ ಹಾಗೂ ವಿಪಕ್ಷಗಳ ಬಗ್ಗೆ ನೀಡಿರುವ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿರುವ ಕಾಂಗ್ರೆಸ್, ನೋಟಿನ ಅಪಮೌಲ್ಯೀಕರಣ ಕುರಿತು ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸದೇ, ಹೊರಗಡೆ ಹೇಳಿಕೆಗಳನ್ನು ನೀಡುವುದು ಹೇಡಿತನವೆಂದು ಬಣ್ಣಿಸಿದೆ.

ಅವರು ಧೈರ್ಯವಂತರೇ ಆಗಿದ್ದರೆ ಹಾಗೂ ನಿಜವನ್ನೇ ಹೇಳುತ್ತಿದ್ದಾರೆಂದಾದಲ್ಲಿ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಬಂದು ಮಾತನಾಡಲಿ. ಸದನದ ಒಳಗಡೆ ಬಂದು ಮಾತನಾಡದೇ, ಹೊರಗಡೆ ಹೇಳಿಕೆಗಳನ್ನು ನೀಡುವುದು ಹೇಡಿತನವಾಗಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಇಂದು ಬೆಳಗ್ಗೆ ಸಂಸತ್ ಭವನದಲ್ಲಿ ನಡೆದ ಸಂವಿಧಾನ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ವಿಪಕ್ಷಗಳಿಗೆ ವಿರುದ್ಧ ವಾಗ್ದಾಳಿ ನಡೆಸಿದ್ದರು. 

ನೋಟು ನಿಷೇಧಿಸುವ ಮುಂಚೆ ಸರ್ಕಾರ ಸಿದ್ಧತೆ ಮಾಡಿಕೊಳ್ಳಲಿಲ್ಲವೆಂದು ವಿಪಕ್ಷದವರು ಹೇಳುತ್ತಿದ್ದಾರೆ. ವಾಸ್ತವದಲ್ಲಿ, ದುಖ:ವಾಗಿರುವುದು ಅವರಿಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಗಲಿಲ್ಲವೆಂಬ ಕಾರಣಕ್ಕಾಗಿ ಎಂದು ಮೋದಿ ಹೇಳಿದ್ದರು.  

 

Follow Us:
Download App:
  • android
  • ios