ಕಾಂಗ್ರೆಸ್ ಸಮರ್ಥ ಪ್ರತಿಪಕ್ಷವಾಗಿ ಹೊರಹೊಮ್ಮಬೇಕೆಂದು ನಾವು ಕೂಡಾ ನಿರೀಕ್ಷಿಸುತ್ತಿದ್ದೇವೆ, ಆದರೆ ಅವರನ್ನು ಮಾರ್ಗದರ್ಶನ ಮಾಡಬೇಕಾದುದು ಬಿಜೆಪಿಯ ಜವಾಬ್ದಾರಿಯಲ್ಲ: ರವಿಶಂಕರ್ ಪ್ರಸಾದ್
ನವದೆಹಲಿ (ಮಾ.18): ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್’ಗೆ ರಾಹುಲ್ ಗಾಂಧಿಯೇ ದೊಡ್ಡ ಸಮಸ್ಯೆಯೆಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಇರುವ ದೊಡ್ಡ ಸಮಸ್ಯೆಯೆಂದರೆ ಅದು ರಾಹುಲ್ ಗಾಂಧಿ, ಕಾಂಗ್ರೆಸ್ ಸಮರ್ಥ ಪ್ರತಿಪಕ್ಷವಾಗಿ ಹೊರಹೊಮ್ಮಬೇಕೆಂದು ನಾವು ಕೂಡಾ ನಿರೀಕ್ಷಿಸುತ್ತಿದ್ದೇವೆ, ಆದರೆ ಅವರನ್ನು ಮಾರ್ಗದರ್ಶನ ಮಾಡಬೇಕಾದುದು ಬಿಜೆಪಿಯ ಜವಾಬ್ದಾರಿಯಲ್ಲ, ಅವರು ಖುದ್ದಾಗಿ ಬದಲಾಗಬೇಕು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಈ ಬಾರಿ ವಿಧಾನಸಭೆ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿರುವಂತೆ ಮುಂದಿನ ವರ್ಷ ಗುಜರಾತ್ ಚುನಾವಣೆಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರವಿಶಂಕರ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
