ಎನ್‌ಎಸ್‌'ಯುಐನ ರಾಕಿ ತುಶೀದ್ ಅವರು ಅಧ್ಯಕ್ಷ ಮತ್ತು ಕುನಲ್ ಸೆಹ್ರಾವತ್ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ನವದೆಹಲಿ(ಸೆ.13): ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ ಎನ್ಎಸ್'ಯುಐ, ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಒಕ್ಕೂಟ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿದೆ.
ಎನ್ಎಸ್'ಯುಐನ ರಾಕಿ ತುಶೀದ್ ಅವರು ಅಧ್ಯಕ್ಷ ಮತ್ತು ಕುನಲ್ ಸೆಹ್ರಾವತ್ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಅದೇ ರೀತಿ ಎಬಿವಿಪಿಯ ಮಹಮೇಧಾ ನಗರ್ ಕಾರ್ಯದರ್ಶಿಯಾಗಿ ಮತ್ತು ಉಮಾ ಶಂಕರ್ ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷದ ಚುನಾವಣೆಯಲ್ಲಿ ಎಬಿವಿಪಿ ಅಧ್ಯಕ್ಷ ಸ್ಥಾನ ಸೇರಿ ಮೂರು ಸ್ಥಾನಗಳನ್ನು ಗೆದ್ದಿತ್ತು.
ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಎನ್ಎಸ್'ಯುಐಗೆ ಶುಭಾಶಯ ಕೋರಿದ್ದಾರೆ.
