ಹೊಳೆನರಸಿಪುರದಲ್ಲಿ ರೇವಣ್ಣ ವಿರುದ್ಧ  ಸ್ಪರ್ಧೆಗೆ ಮುಂದಾಗಿದ್ದ ಬಿ.ಪಿ.ಮಂಜೆಗೌಡರ  ರಾಜೀನಾಮೆ ಅಂಗೀಕಾರಕ್ಕೆ ಕಾನೂನು ಇಲಾಖೆ ಅಡ್ಡಿ ವ್ಯಕ್ತಪಡಿಸಿದೆ. 

ಮೈಸೂರು (ಏ. 07): ಹೊಳೆನರಸಿಪುರದಲ್ಲಿ ರೇವಣ್ಣ ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದ ಬಿ.ಪಿ.ಮಂಜೆಗೌಡರ ರಾಜೀನಾಮೆ ಅಂಗೀಕಾರಕ್ಕೆ ಕಾನೂನು ಇಲಾಖೆ ಅಡ್ಡಿ ವ್ಯಕ್ತಪಡಿಸಿದೆ. 

ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಬಿ.ಪಿ.ಮಂಜೇಗೌಡ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದರು. ಮಂಜೇಗೌಡರ ವಿರುದ್ಧ ಲೋಕಾಯುಕ್ತ ಪ್ರಕರಣವಿರುವ ಹಿನ್ನೆಲೆಯಲ್ಲಿ ರಾಜೀನಾಮೆಯನ್ನು ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ. 

ಕ್ರಿಮಿನಲ್ ಪ್ರಕರಣದ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜೀನಾಮೆ ಅಂಗೀಕಾರಕ್ಕೆ ಸಾಧ್ಯವಿಲ್ಲ. ರಾಜೀನಾಮೆ ಅಂಗೀಕಾರಕ್ಕೆ ನಿಯಮಾವಳಿಗಳು ಇಲ್ಲದ ಕಾರಣಕ್ಕೆ ಅಂಗೀಕಾರ ಸಾಧ್ಯವಿಲ್ಲ ಎಂದು ಡಿಪಿಎಆರ್ ಗೆ ಕಾನೂನು ಇಲಾಖೆ ಅಭಿಪ್ರಾಯ ತಿಳಿಸಿದೆ. ರಾಜೀನಾಮೆ ಅಂಗೀಕಾರಕ್ಕೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಕಸರತ್ತು ನಡೆದಿತ್ತು.