ಇಂದು ಮಧ್ಯಾಹ್ನ 2.30ಕ್ಕೆ ರಾಹುಲ್‌ ಗಾಂಧಿ ಬೆಳಗಾವಿಗೆ ಆಗಮಿಸಲಿದ್ದು. ರಾಹುಲ್‌ಗೆ ಝೆಡ್‌ ಪ್ಲಸ್‌ ಭದ್ರತೆ ಒದಗಿಸಲಾಗಿದೆ.  ಸುಮಾರು  ಒಂದು ಲಕ್ಷ  ಜನ ಸೇರುವ ಸಾಧ್ಯತೆ ಇದ್ದು ಮುಂಜಾಗೃತವಾಗಿ 11 ಎಸ್ಪಿ, 22 ಡಿವೈಎಸ್ಪಿ, 55 ಸಿಪಿಐ,  136 ಪಿಎಸ್‌ಐ ಸೇರಿ ಒಟ್ಟು 2800ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ.

ಬೆಳಗಾವಿ(ಡಿ.17): ಇಂದಿರಾಗಾಂಧಿ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ, ರಾಹುಲ್‌ ಗಾಂಧಿ ಆಗಮಿಸುತ್ತಿದ್ದಾರೆ. ಮುಂಬರುವ 2018ರ ಚುನಾವಣೆಗೆ ಬೆಳಗಾವಿಯಿಂದಲೇ ರಾಹುಲ್‌ ಕಹಳೆ ಮೊಳಗಿಸಲಿದ್ದು, ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೋಟ್‌ ಬ್ಯಾನ್‌ ಸೇರಿ ಆಡಳಿತ ವೈಫಲ್ಯವನ್ನ ಜನರ ಮುಂದಿಡಲಿದ್ದಾರೆ.

ರಾಹುಲ್‌ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾ ಕ್ರಿಡಾಂಗಣದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೃಹತ್‌ ವೇದಿಕೆ ಮತ್ತು 30 ಸಾವಿರಕ್ಕೂ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಹುಲ್‌ ಕಾರ್ಯಕ್ರಮದ ಸಿದ್ಧತೆ ವೀಕ್ಷಣೆಗಾಗಿ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌‌ ಭೇಟಿ ನೀಡಿ ಸಿದ್ಧತೆ ಮತ್ತು ಭದ್ರತೆ ಪರಿಶೀಲನೆ ಮಾಡಿದ್ದಾರೆ. ಇನ್ನು ಸಮಾರಂಭಕ್ಕೆ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ. 

ಇಂದು ಮಧ್ಯಾಹ್ನ 2.30ಕ್ಕೆ ರಾಹುಲ್‌ ಗಾಂಧಿ ಬೆಳಗಾವಿಗೆ ಆಗಮಿಸಲಿದ್ದು. ರಾಹುಲ್‌ಗೆ ಝೆಡ್‌ ಪ್ಲಸ್‌ ಭದ್ರತೆ ಒದಗಿಸಲಾಗಿದೆ. ಸುಮಾರು ಒಂದು ಲಕ್ಷ ಜನ ಸೇರುವ ಸಾಧ್ಯತೆ ಇದ್ದು ಮುಂಜಾಗೃತವಾಗಿ 11 ಎಸ್ಪಿ, 22 ಡಿವೈಎಸ್ಪಿ, 55 ಸಿಪಿಐ, 136 ಪಿಎಸ್‌ಐ ಸೇರಿ ಒಟ್ಟು 2800ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ.

ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶದ ಮಧ್ಯೆಯೇ ಮೇಟಿ ರಾಜೀನಾಮೆಯಿಂದ ತೆರುವಾದ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟಿದ್ದು, ಯುವರಾಜನ ಮುಂದೆ ಸಚಿವಾಕಾಂಕ್ಷಿಗಳ ದಂಡೆ ಸಿದ್ಧವಾಗಿದೆ.