ಬೆಂಗಳೂರು, [ಸೆ.22]: ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಮೇಲ್ನೋಟಕ್ಕೆ ಪರಿಸ್ಥಿತಿ ತಿಳಿಯಾಗಿದೆ. ಆದರೂ ಒಳಗೊಳಗೇ ದೋಸ್ತಿ ಸರ್ಕಾರದ ನಾಯಕರು ಆಪರೇಷನ್ ಕಮಲಕ್ಕೆ ಹೌಹಾರಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲ ಭಯ ಶುರುವಾಗಿದೆ. ಜಾರಕಿಹೊಳಿ ಬ್ರದರ್ಸ್ ಎಬ್ಬಿಸಿದ್ದ ಅಸಮಾಧಾನದ ಕಿಡಿ ಇದೀಗ ಸಮ್ಮಿಶ್ರ ಸರ್ಕಾರವನ್ನು ನಿದ್ದೆಗೆಡಿಸಿದೆ. 

ಇದನ್ನೂ ಓದಿ: ಆಪರೇಷನ್ ಕಮಲಕ್ಕೆ ಗುದ್ದು ನೀಡಲು ಸಿದ್ದು ಎಂಟ್ರಿ!

ಹತ್ತಕ್ಕೂ ಹೆಚ್ಚು ಶಾಸಕರು ಈಗಾಗಲೇ ಬಿಜೆಪಿ ತೆಕ್ಕೆಗೆ ಹೋಗಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಹೀಗಾಗಿ ಸಿಎಂ ಸೇರಿದಂತೆ ಪ್ರಮುಖ ನಾಯಕರು ಗಲಿಬಿಲಿಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶತಾಯಗತಾಯವಾಗಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

 ಇದನ್ನೂ ಓದಿ: ಅಡ್ಡ ಕತ್ತರಿಯಲ್ಲಿ ಮೈತ್ರಿ ಸರ್ಕಾರ

ಇದಕ್ಕಾಗಿ ಬೆಂಗಳೂರು ಬಿಟ್ಟು ಜೆಡಿಎಸ್ ಭದ್ರಕೋಟೆ ಅನಿಸಿಕೊಂಡಿರೋ ಹಾಸನದಲ್ಲಿ ಜೆಡಿಎಸ್ ಶಾಸಕರ ಜೊತೆ ಸಭೆ ಮಾಡಲಾಗ್ತಿದೆ. ಇನ್ನು ಕಾಂಗ್ರೆಸ್ ಸೆ.25ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ. ಜಾರಕೊಹೊಳಿ ಸಹೋದರರು ಹಾಗೂ ಅವರ ತಂಡದ ಅಸಮಾಧದ ಲಾಭ ಪಡೆಯಲು ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಇಳಿದಿದ್ದಾರೆ.  

ಇದ್ರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಲ್ಲಿ ಭಯ ಹುಟ್ಟಿಸಿದೆ. ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಕಾವೇರುತ್ತಿರುವ ಬೆನ್ನಲ್ಲೇ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್​ ಮತ್ತು ಜೆಡಿಎಸ್ ಮುಂದಾಗಿಗಿದೆ.

ಸಭೆ ಮೇಲೆ ಸಭೆಯ ಕೆಲ ಮುಖ್ಯಾಂಶಗಳು

* ತಡರಾತ್ರಿ ವರೆಗೆ ಕ್ಯಾಬಿನೆಟ್ ನಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆ ನಡೆಸಿದ್ದಾರೆ.
* ಆಸ್ಪತ್ರೆ ಯಲ್ಲಿದ್ದ ಡಿಕೆಶಿ ಯನ್ನು ಆರೋಗ್ಯ ವಿಚಾರಿಸೋ ನೆಪದಲ್ಲಿ ದೇವೇಗೌಡರು ಭೇಟಿ ಆಗಿದ್ದರು.
*ಒಂದು ದಿನ ಮೊದಲೇ ಡಿಸ್ಜಾರ್ಜ್ ಮಾಡಿಸಿಕೊಂಡ ಡಿಕೆಶಿ ನೇರವಾಗಿ ಸಿದ್ದರಾಮಯ್ಯ ನಿವಾಸಕ್ಕೆ ಹೋಗಿದ್ರು.
*ಸಿದ್ದರಾಮಯ್ಯ ಡಿಕೆಶಿ ಪ್ರತ್ಯೇಕ ಚರ್ಚೆ.
* ದಿಢೀರನೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದ ಸಿಎಂ ಕುಮಾರಸ್ವಾಮಿ.
*ನಿನ್ನೆ ಸಹ ದೇವೇಗೌಡರ ಮನೆಯಲ್ಲಿ ಸಿಎಂ ಕುಮಾರಸ್ವಾಮಿ ಮಾತುಕತೆ.
 *ಹಾಸನದಲ್ಲಿ ಜೆಡಿಎಸ್ ಶಾಸಕರ ಜೊತೆ ಸಭೆ ಮಾಡಲಾಗ್ತಿದೆ.
*ಸೆ. 25ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ.