Asianet Suvarna News Asianet Suvarna News

ರಾಜ್ಯದ ಉಪ ಚುನಾವಣೆ:ಕಾಂಗ್ರೆಸ್'ಗೆ ಮುಖಭಂಗ, ಜೆಡಿಎಸ್ ಜಯಭೇರಿ

ಕೋಲಾರ ನಗರಸಭೆ 21ನೇ ವಾರ್ಡ್​ನಲ್ಲಿ ಜೆಡಿಎಸ್ ಅಭ್ಯರ್ಥಿ ಮೋಹನ್ ಬಾಬು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪರ ಭರ್ಜರಿ ಪ್ರಚಾರ ನಡೆಸಿದ್ದ ಶಾಸಕ ವರ್ತೂರು ಪ್ರಕಾಶ್ ಗೆ ತೀವ್ರ  ಮುಖಭಂಗವಾಗಿದೆ.

Cong Loss Local body by Election

ಬೆಂಗಳೂರು(ಜು.05): 2018ರ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಈ ಬೆನ್ನಲ್ಲೇ ಇಂದು ವಿವಿಧೆಡೆ ಬೈ ಎಲೆಕ್ಷನ್ ರಿಸಲ್ಟ್​ ಹೊರಬಿದ್ದಿದ್ದು ಕಾಂಗ್ರೆಸ್​​ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಇದ್ರಿಂದಾಗಿ ಕಾಂಗ್ರೆಸ್​​ ನಾಯಕರಿಗೆ ಭಾರೀ ಮುಖಭಂಗವಾಗಿದೆ.

ಮದ್ದೂರಿನ ಕೊಪ್ಪ ಜಿಲ್ಲಾ ಪಂಚಾಯತ್​ ಕ್ಷೇತ್ರ ಮತ್ತು ನಗರಸಭೆ ವಾರ್ಡ್ ನಂ-28ಕ್ಕೆ ಉಪ ಚುನಾವಣೆ ನಡೆದಿತ್ತು. ಎರಡರಲ್ಲೂ ಕೈ ಅಭ್ಯರ್ಥಿ ಗಳು ಪರಾಭವಗೊಂಡಿದ್ದಾರೆ. ಈ ಸೋಲಿನಿಂದ ಮಾಜಿ  ಸಚಿವ  ಅಂಬರೀಶ್'ಗೆ  ತೀವ್ರ ಮುಖಭಂಗವಾಗಿದ್ದು ಜಿಲ್ಲೆಯಲ್ಲಿ ಅಂಬಿಯ ವರ್ಚಸ್ಸು ಕುಸಿದಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 32 ರ ಬೈ ಎಲೆಕ್ಷನ್​​ನಲ್ಲೂ ಜೆಡಿಎಸ್ ಜಯಭೇರಿ ಬಾರಿಸಿದೆ.

ಬಾಗಲಕೋಟೆಯ ತಾಲೂಕಾ ಪಂಚಾಯತಿ ಉಪಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳದ್ದೇ ಕಲರವ. ಹುನಗುಂದ ಪಟ್ಟಣದ ಪುರಸಭೆಯ ಮೂರನೇ ವಾರ್ಡ್​​ನಲ್ಲಿ ಕಮಲ ಅರಳಿದೆ. ಪಟ್ಟದಕಲ್ಲು ತಾಲೂಕು ಪಂಚಾಯ ಬೈ ಎಲೆಕ್ಷನ್​ನಲ್ಲೂ ಬಿಜೆಪಿಯ ಕುಮಾರ ರೋಣದ ಗೆಲುವು ಸಾಧಿಸಿದ್ದಾರೆ.

ಕೋಲಾರದಲ್ಲಿ ಜೆಡಿಎಸ್ ಜಯಭೇರಿ

ಇತ್ತ, ಕೋಲಾರ ನಗರಸಭೆ 21ನೇ ವಾರ್ಡ್​ನಲ್ಲಿ ಜೆಡಿಎಸ್ ಅಭ್ಯರ್ಥಿ ಮೋಹನ್ ಬಾಬು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪರ ಭರ್ಜರಿ ಪ್ರಚಾರ ನಡೆಸಿದ್ದ ಶಾಸಕ ವರ್ತೂರು ಪ್ರಕಾಶ್ ಗೆ ತೀವ್ರ  ಮುಖಭಂಗವಾಗಿದೆ.

ಇನ್ನು ಬೀದರ್ ನಗರಸಭೆ ವಾರ್ಡ್​ ನಂಬರ್ 33ರ​ಲ್ಲಿ ಕಾಂಗ್ರೆಸ್​ ಪಕ್ಷದ ಸರಸ್ವತಿ ಗೆಲವು ಸಾಧಿಸಿದ್ದಾರೆ. ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ತಾಲೂಕು ಪಂಚಾಯತ್ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕವಿತಾ ತಿನೇಕರ್​ ಗೆದ್ದು ಬೀಗಿದ್ದಾರೆ. ಒಟ್ಟಿನಲ್ಲಿ ಇವತ್ತಿನ ಉಪಚುನಾವಣೆಯ ಫಲಿತಾಂಶ ಮುಂದಿನ ಅಸೆಂಬ್ಲಿ ಎಲೆಕ್ಷನ್​ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

Follow Us:
Download App:
  • android
  • ios